ಗೋರಕ್ಷಕರ ಅಟ್ಟಹಾಸ: 33 ವಾರಗಳಲ್ಲಿ 30 ಹಿಂಸಾ ಪ್ರಕರಣಗಳು

ವರದಿಗಾರ ವಿಶೇಷ: ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಹೆಚ್ಚಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

ಆದರೆ ಇಂಡಿಯಾ ಸ್ಪೆಂಡ್ ಅಂಕಿ ಅಂಶಗಳು ನಿಜಕ್ಕೂ ಆಘಾತಕಾರಿಯಾಗಿವೆ. ಅಂಕಿ ಅಂಶಗಳ ಪ್ರಕಾರ 2017ರ 33 ವಾರಗಳಲ್ಲಿ ಭಾರತದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ 30ನೆಯ ಹಿಂಸಾ ಪ್ರಕರಣವು ಬೆಳಕಿಗೆ ಬಂದಿದೆ. ಸರಿಸುಮಾರು ವಾರಕ್ಕೊಂದರಂತೆ ಕೇಸರಿ ಭಯೋತ್ಪಾದಕರ ಅಟ್ಟಹಾಸಕ್ಕೆ ಭಾರತ ಸಾಕ್ಷಿಯಾಗಿದೆ.

30ನೇ ಪ್ರಕರಣವು ಬಿಹಾರದಿಂದ ವರದಿಯಾಗಿದೆ. ಬಿಹಾರದ ಡುಮ್ರ ಗ್ರಾಮದಲ್ಲಿ ಮುಹಮ್ಮದ್ ಶಹಾಬುದ್ದೀನ್ ಎನ್ನುವವರ ಮನೆಯ ಮುಂದೆ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು, ಶಹಾಬುದ್ದೀನ್ ಹಾಗೂ ಅವರ ನೆರೆಮನೆಯವರನ್ನು ಗೋಹತ್ಯೆ ಹಾಗೂ ಗೋಭಕ್ಷಣೆಯ ಆರೋಪ ಹೊರಿಸಿ, ಕೊಠಡಿಯೊಂದರಲ್ಲಿ ಬಂಧಿಯಾಗಿಸಿ ಅಮಾನುಷವಾಗಿ ಥಳಿಸಿದರು. ಉಳಿದ ಪ್ರಕರಣಗಳಂತೆ ಇದರಲ್ಲೂ ಪೊಲೀಸರು ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸದೆ, ಹಲ್ಲೆಗೊಳಗಾದವರ ಮೇಲೆ ಸ್ಥಳೀಯ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕೇಸು ದಾಖಲಿಸಿದರು. ಬಿಹಾರದಲ್ಲಿ ನಿತೀಶ್ ಕುಮಾರ್- ಬಿಜೆಪಿ ಜಂಟಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹದಿನೈದು ದಿನಗಳಲ್ಲಿ ಎರಡನೇ ಪ್ರಕರಣವಾಗಿದೆ ಇದು. 2017ರ ಮೂರನೆ ಪ್ರಕರಣವಾಗಿದೆ. 2017ರ ಮೊದಲು, ಕಳೆದ ಏಳು ವರ್ಷಗಳಲ್ಲಿ ಗೋವಿನ ಹೆಸರಿನಲ್ಲಿ ಯಾವುದೇ ಹಿಂಸೆಯೂ ಬಿಹಾರದಲ್ಲಿ ನಡೆದಿಲ್ಲ (ಇಂಡಿಯ ಸ್ಪೆಂಡ್ ಬಳಿ 2010ರ ವರೆಗಿನ ಮಾಹಿತಿ ಮಾತ್ರ ಇದೆ). 2010ರ ನಂತರ ಭಾರತದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಒಟ್ಟು 75 ಹಿಂಸಾ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 73 ಪ್ರಕರಣಗಳು (97%) ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಬಳಿಕ ವರದಿಯಾಗಿವೆ. ಅರ್ದಕ್ಕಿಂತಲೂ ಹೆಚ್ಚು, 75 ರಲ್ಲಿ 40 (53%) ಪ್ರಕರಣಗಳಲ್ಲಿಯೂ, ಹಿಂಸೆ ನಡೆಯುವ ಸಂದರ್ಭದಲ್ಲಿ, ಹಿಂಸೆ ನಡೆದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು.

error: Content is protected !!
%d bloggers like this:
Inline
Inline