ರಾಜ್ಯ ಸುದ್ದಿ

‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಕನಸು ನನಸಾಗಲಿದೆ: ಯಡಿಯೂರಪ್ಪರ ಅತಿಯಾದ ಕನಸು

ವರದಿಗಾರ (ಎ.13): ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನಂತೆ ಕರ್ನಾಟಕ ರಾಜ್ಯದಲ್ಲೂ ಆದೇ ರೀತಿಯ ಫಲಿತಾಂಶ ಬರಲಿದ್ದು, ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಕನಸು ನನಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತನ್ನ ಅತಿಯಾದ ಕನಸನ್ನು ವ್ಯಕ್ತಪಡಿಸಿದ್ದಾರೆ.

ಅವರು  ಬಾಗಲಕೋಟೆಯ ಮುಧೋಳದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 29 ದಿನಗಳು ಬಾಕಿ ಉಳಿದಿವೆ. ಶಕ್ತಿ ಕೇಂದ್ರದ ಪ್ರಮುಖರು ಒಂದು ಕ್ಷಣವೂ ವ್ಯರ್ಥಮಾಡದೇ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದ್ದಾರೆ.

‘ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮನಬಂದತೆ ಮಾತನಾಡುತ್ತಿದ್ದಾರೆ. ಎರಡೂ ಕಡೆ ಸ್ಪರ್ಧೆ ಮಾಡಲು ಹೊರಟ ಅವರಿಗೆ ಸೋಲು ನಿಶ್ಚಿತ’ ಎಂದು ಭವಿಷ್ಯ ನುಡಿದಿದ್ದಾರೆ.

‘ಅಭ್ಯರ್ಥಿ ಯಾರು ಎಂದು ಈಗಾಗಲೇ ಘೋಷಣೆಯಾಗಿದ್ದು, ಆಕಾಂಕ್ಷಿಗಳು ಬೇಸರಪಡುವ ಅವಶ್ಯಕತೆ ಇಲ್ಲ. ಸಮೀಕ್ಷೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group