ಸುತ್ತ-ಮುತ್ತ

ಜಮ್ಮುವಿನ ಕಥವಾದಲ್ಲಿ ನಡೆದಿರುವ ಆಸಿಫಾಳ ಸಾಮೂಹಿಕ ಅತ್ಯಾಚಾರ ಹಾಗೂ ಭೀಬತ್ಸ ಕೊಲೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ವತಿಯಿಂದ ಜಾಗೃತಿ ಅಭಿಯಾನ

ಪುತ್ತೂರು: ಜಮ್ಮು ಕಾಶ್ಮೀರದ ಕಥವಾ ಎಂಬ ಜಿಲ್ಲೆಯಲ್ಲಿ ನಡೆದಂತಹ ಆಸಿಫಾ ಬಾನು ಎಂಬ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಭೀಬತ್ಸ ಕೊಲೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ಜುಮಾ ಮಸೀದಿ ಬಳಿ ಜಾಗೃತಿ ಅಭಿಯಾನ ನಡೆಯಿತು. ಕ್ಯಾಂಪಸ್ ಫ್ರಂಟ್ ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ಮಾತನಾಡಿ ಈ ಪ್ರಕರಣದ ಐದು ಆರೋಪಿಗಳಲ್ಲಿ ನಾಲ್ಕು ಮಂದಿಯು ಪೋಲಿಸರಾಗಿದ್ದು ಇಲ್ಲಿ ರಕ್ಷಣೆ ಒದಗಿಸಬೇಕಾದವರು ಈ ರೀತಿಯ ನೀಚ ಕ್ರತ್ಯವೆಸಗಿದ್ದು ಕಾನೂನು ವ್ಯವಸ್ಥೆಗೆ ಅವಮಾನವೆಂದರು. ಅದೇ ರೀತಿ ಈ ಬಂಧಿಸಲ್ಪಟ್ಟ ಐದು ಆರೋಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಪ್ರತಿಭಟನೆ ಮಾಡುತ್ತಿರುವುದು ಇಲ್ಲಿ ನ್ಯಾಯವನ್ನು ಒದಗಿಸಬೇಕಾದಂತಹ ಬಾರ್ ಅಸೋಸಿಯೇಷನ್ ಎಂಬ ವಕೀಲರ ಸಂಘಟನೆಯಾಗಿದೆ. ಇದು ಈ ದೇಶದ ದೊಡ್ಡ ದುರಂತವೇ ಸರಿ ಎಂದರು. ಇದೇ ಸಮಯದಲ್ಲಿ ಸವಣೂರು ಮಸೀದಿಯ ಮುಂಭಾಗದಲ್ಲೂ ಜಾಗೃತಿ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಅಂಕತ್ತಡ್ಕ, ಸಮಿತಿ ಸದಸ್ಯರಾದ ಶಿಯಾಬ್ ಬೀಟಿಗೆ, ಸಂಶೀರ್ ಸವಣೂರು ಉಪಸ್ಥಿತರಿದ್ದರು .

To Top
error: Content is protected !!
WhatsApp chat Join our WhatsApp group