ರಾಷ್ಟ್ರೀಯ ಸುದ್ದಿ

ಕೃಷ್ಣ ಮೃಗ ಬೇಟೆ : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ !!

ವರದಿಗಾರ (ಎ 5 ) : ಜೋಧಪುರದ ಕೋರ್ಟ್ ಒಂದು  1998 ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಇತರೆ ಕಲಾವಿದರು ನಡೆಸಿದ್ದಾರೆನ್ನಲಾದ ಕೃಷ್ಣ ಮೃಗ ಬೇಟೆಯ ಪ್ರಕರಣದಲ್ಲಿ ಇಂದು ತೀರ್ಪು ನೀಡಿದ್ದು, ನಟ ಸಲ್ಮಾನ್ ಖಾನ್ ಆರೋಪ ಸಾಬೀತಾಗಿದ್ದು, ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ತೀರ್ಪು ಪ್ರಕಟಿಸಿದ ಕೋರ್ಟ್, ಸಲ್ಮಾನ್ ಓರ್ವ “ರೂಢಿಯಲ್ಲಿರುವ ಅಪರಾಧಿ” ಎಂದು ಹೇಳಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದ್ದ ಇತರೆ ನಟರಾದ ಸೈಫ್ ಅಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆಯವರನ್ನು ಕೋರ್ಟ್ ನಿರಪರಾಧಿಗಳೆಂದು ಘೋಷಿಸಿ ಆರೋಪ ಮುಕ್ತಗೊಳಿಸಿದೆ.

ಸಲ್ಮಾನ್ ಮತ್ತು ಇತರರು 1998 ರಲ್ಲಿ ‘ಹಮ್ ಸಾತ್ ಸಾತ್ ಹೆ’ ಚಲನಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ, ಜೋಧಪುರದ ಕಂಕಣಿ ಗ್ರಾಮದಲ್ಲಿ ಕಪ್ಪು ಚಿಗರೆಯನ್ನು ಬೇಟೆಯಾಡಿದ ಆರೋಪ ಹೊರಿಸಲಾಗಿತ್ತು. ಅದರಂತೆ ಸಲ್ಮಾನ್ ವನ್ಯ ಜೀವಿ ರಕ್ಷಣಾ ಕಾಯ್ದೆಯ ಸೆಕ್ಷನ್ 51 ರಂತೆ ಆರೋಪಿ ಎಂದು ಘೋಷಿಸಲಾಗಿದೆ.

ಸಲ್ಮಾನ್ ಖಾನ್ ಆರೋಪ ಸಾಬೀತುಗೊಂಡಿದ್ದರಿಂದಾಗಿ ಬಾಲಿವುಡ್ ಈಗ ಆತಂಕದಲ್ಲಿದೆ.  ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿರುವ ಹೂಡಿಕೆದಾರರು ಚಿಂತೆಗೀಡಾಗಿದ್ದಾರೆ. ಸಲ್ಮಾನ್ ಖಾನ್ ‘ರೇಸ್3’ ಶೂಟಿಂಗ್ ಗೆಂದು ದುಬಾಯಿಗೆ ಹೋಗಿದ್ದರು. ಪ್ರಕರಣದ ತೀರ್ಪಿಗಾಗಿ ಇಂದು ಭಾರತಕ್ಕೆ ಬಂದಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group