ರಾಷ್ಟ್ರೀಯ ಸುದ್ದಿ

ವೋಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡಬೇಡಿ: ರವಿ ಶಂಕರ್ ಪ್ರಸಾದ್

ವರದಿಗಾರ(02-04-2018): ತಾನು ವೋಟರ್ ಐಡಿ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದರ ಪರವಾಗಿಲ್ಲವೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

“ನಾನು ಇದನ್ನು ಮಾಹಿತಿ ತಂತ್ರಜ್ಞಾನ ಸಚಿವನಾಗಿ ಹೇಳುತ್ತಿಲ್ಲ, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ವೋಟರ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಾರದು.” ಎಂದು ಅವರು ಆದಿತ್ಯವಾರದಂದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಹಾಗೇನಾದರೂ ನಾವು ಮಾಡಿದಲ್ಲಿ, ನಮ್ಮ ವಿರೋಧಿಗಳು ಬಿಜೆಪಿ ಸರಕಾರದ ಮೇಲೆ ರಹಸ್ಯ ಬೇಹುಗಾರಿಕೆಯ ಆರೋಪವನ್ನು ಮಾಡಬಹುದು ಎಂದು ಅವರು ಹೇಳಿದರು. “ನಾವು ಏನು ತಿನ್ನುತ್ತಿದ್ದೇವೆ, ಯಾವ ಚಲನಚಿತ್ರವನ್ನು ವೀಕ್ಷಿಸುತ್ತಿದ್ದೇವೆ ಎನ್ನುವುದನ್ನು ನರೇಂದ್ರ ಮೋದಿ ತಿಳಿಯಬಯಸುತ್ತಾರೆ” ಎಂಬ ಆರೋಪಗಳು ಬರಬಹುದೆಂದು ಅವರು ಹೇಳಿದರು.

ವಿಚಿತ್ರವೇನಂದರೆ, ಈ ರೀತಿಯ ರಹಸ್ಯ ಬೇಹುಗಾರಿಕೆ ನಡೆಯುತ್ತಿದೆಯೆಂಬ ಆರೋಪ ಈಗಾಗಲೇ ಮಾಡಲಾಗಿದೆ. ವೋಟರ್ ಐಡಿ ಹಾಗೂ ಚಲನಚಿತ್ರ, ಆಹಾರಕ್ಕೆ ಯಾವುದೇ ಸಂಬಂಧವಿಲ್ಲ. ವೋಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡಿದರೆ ಚುನಾವಣಾ ವ್ಯವಸ್ಥೆಯು ಪಾರದರ್ಶಿಕವಾಗಿರಬಹುದು.

ಆದರೆ, ಈಗಾಗಲೇ ಭಾರತೀಯರ ಮಾಹಿತಿಯ ದುರುಪಯೋಗಪಡಿಸಿದ ಆರೋಪ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ನಮೋ ಆಪ್’ ಮೇಲಿದೆ.
ಅದಲ್ಲದೆ, ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದೂ ಇದಕ್ಕೆ ಮುನ್ನ ಹಲವು ಆರೋಪಗಳು ಉಧ್ಬವಿಸಿವೆ. ಎಲ್ಲಾ ಕಡೆಯಲ್ಲೂ ಆಧಾರ್ ಲಿಂಕ್ ಮಾಡಲು ಬಲವಂತಪಡಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ವೋಟರ್ ಐಡಿ ಜೊತೆ ಲಿಂಕ್ ಮಾಡಿಸಲು ಹಿಂಜರಿಯುತ್ತಿರುವುದು ಆಶ್ವರ್ಯಕರವಾಗಿದೆ. ವೋಟರ್ ಐಡಿ ಜೊತೆ ಲಿಂಕ್ ಮಾಡಿಸಿದರೆ ಚುನಾವಣೆಯಲ್ಲಿ ‘ಕೈ ಚಳಕ’ ಅಸಾಧ್ಯ, ಹಾಗಾಗಿ ಸರಕಾರ ಹಿಂಜರಿಯುತ್ತಿದೆ ಎನ್ನುವುದು ಕೆಲವರ ವಾದ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group