ರಾಷ್ಟ್ರೀಯ ಸುದ್ದಿ

ಮುಸ್ಲಿಮರ ಸಹನೆಯೇ ಭಾರತದಲ್ಲಿ ಕೋಮು ಶಾಂತಿಗೆ ಕಾರಣವಾಗಿದೆ: ಸಂಜೀವ್ ಭಟ್

ವರದಿಗಾರ(01-04-2018) : ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ತನ್ನ 16ರ ಹರೆಯದ ಮಗನನ್ನು ಕಳೆದುಕೊಂಡ ಅಸಂಸೋಲ್ ಮಸೀದಿಯ ಇಮಾಮ್ ಮೌಲಾನಾ ಇಮಾದುಲ್ ರಾಶಿದಿ ಶಾಂತಿ ಕಾಪಾಡುವಂತೆ ಕೇಳಿಕೊಂಡಿದ್ದರು. ತನ್ನ ಮಗನ ಹತ್ಯೆಗೆ ಪ್ರತೀಕಾರ ಮಾಡದಂತೆಯೂ, ಮಾಡಿದರೆ ತಾನು ಊರು ಬಿಟ್ಟು ಹೋಗುವಂತೆಯೂ ಎಚ್ಚರಿಕೆ ನೀಡಿದ್ದರು.

ಇಮಾಮ್ ರಾಶಿದಿಯ ಶಾಂತಿಯ ಮನವಿಯನ್ನು ಹೊಗಳಿದ ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್, ಒಂದು ಸಮುದಾಯಕ್ಕೆ ನೋಬೆಲ್ ಪುರಸ್ಕಾರ ನೀಡುವುವಂತಿದ್ದರೆ ತನ್ನ ಮತವು ಭಾರತೀಯ ಮುಸ್ಲಿಮರಿಗಾಗಿದೆ ಎಂದು ಹೇಳಿದ್ದಾರೆ. ಇಂದು ನಾವು ಭಾರತದಲ್ಲಿ ಕಾಣುತ್ತಿರುವ ಕೋಮು ಶಾಂತಿಗೆ ಕಾರಣ ಪೂರ್ವಾಗ್ರಹ ಹಾಗೂ ಧ್ವೇಷಕ್ಕೆ ಪ್ರತಿಕಿಯಿಸಲು ನಿರಾಕರಿಸುವ ಮುಸ್ಲಿಮರಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇಮಾಮ್ ಹಾಗೂ ದೆಹಲಿಯ ಯಶ್ಪಾಲ್ ಸಕ್ಸೇನಾರನ್ನು ಶನಿವಾರದಂದು ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಶ್ಪಾಲ್ ಸಕ್ಸೇನಾರ ಮಗ ಅಂಕಿತ್ ಸಕ್ಸೇನಾ ಎಂಬ ಯುವಕನನ್ನು ಆತನು ಪ್ರೀತಿಸುತ್ತಿದ್ದ ಮುಸ್ಲಿಮ್ ಹುಡುಗಿಯ ಕುಟುಂಬದವರು ಫೆಬ್ರವರಿ 1ರಂದು ಹತ್ಯೆ ಮಾಡಿದ್ದರು. ತನ್ನ ಮಗನ ಹತ್ಯೆಯನ್ನು ಧರ್ಮಗಳ ನಡುವೆ ಧ್ವೇಷ ಬಿತ್ತಲು ಉಪಯೋಗಿಸದಂತೆ ಅಂದು ಯಶ್ಪಾಲ್ ಸಕ್ಸೇನಾ ಮನವಿ ಮಾಡಿದ್ದರು.

To Top
error: Content is protected !!
WhatsApp chat Join our WhatsApp group