ರಾಷ್ಟ್ರೀಯ ಸುದ್ದಿ

ರಾಗ ಬದಲಿಸಿದ ಆರೆಸ್ಸೆಸ್; ‘ಕಾಂಗ್ರೆಸ್ ಮುಕ್ತ ಭಾರತ’ ಆರೆಸ್ಸೆಸ್ ಘೋಷಣೆಯಲ್ಲ – ಮೋಹನ್ ಭಾಗ್ವತ್

ಬಿಜೆಪಿಯ ಚುನಾವಣಾ ಘೋಷಣೆಯನ್ನು ತಳ್ಳಿ ಹಾಕಿದ ಆರೆಸ್ಸೆಸ್

ವರದಿಗಾರ(ಎ.02): ಬಿಜೆಪಿಯು ಕಳೆದ ಕೆಲವು ವರ್ಷಗಳಿಂದ ಉಪಯೋಗಿಸುತ್ತಿರುವ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಚುನಾವಣಾ ಘೋಷಣೆಯನ್ನು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾದ ಆರೆಸ್ಸೆಸ್ ತಳ್ಳಿ ಹಾಕಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಪುಸ್ತಕವೊಂದನ್ನು ಬಿಡುಗಡೆಗೊಳಿಸಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ‘ಕಾಂಗ್ರೆಸ್ ಮುಕ್ತ ಭಾರತ’ ಆರೆಸ್ಸೆಸ್ ಘೋಷಣೆಯಲ್ಲ ಎಂದು ರಾಗ ಬದಲಿಸಿದ್ದಾರೆ. ಅದೊಂದು ಕೇವಲ ರಾಜಕೀಯ ಘೋಷಣೆಯಾಗಿದ್ದು, ‘ಮುಕ್ತ’ ಶಬ್ದವು ರಾಜಕೀಯದಲ್ಲಿ ಬಳಕೆಯಾಗುತ್ತದೆಯೇ ಹೊರತು, ಆರೆಸ್ಸೆಸ್ ಈ ತರಹ ಭಾಷೆಯನ್ನು ಉಪಯೋಗಿಸುವುದಿಲ್ಲ ಎಂದು ಹೇಳಿದ್ದಾರೆ.

ನಾವು ಯಾವತ್ತೂ , ಯಾರನ್ನೂ ಹೊರತಾಗಿಸುವ ಬಗ್ಗೆ ಮಾತನಾಡುವುದಿಲ್ಲ. ದೇಶ ನಿರ್ಮಾಣದಲ್ಲಿ ನಾವು, ನಮ್ಮನ್ನು ವಿರೋಧಿಸುವವರನ್ನೂ ಜೊತೆ ಸೇರಿಸಬೇಕೆಂದು ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ತಾವು ಮಹಾತ್ಮಾ ಗಾಂಧಿಯ ‘ಕಾಂಗ್ರೆಸ್ ಮುಕ್ತ ಭಾರತ’ದ ಕನಸನ್ನು ನನಸಾಗಿಸುವಲ್ಲಿ ಕಾರ್ಯ ನಿರತರಾಗಿದ್ದೇವೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

To Top
error: Content is protected !!
WhatsApp chat Join our WhatsApp group