ಅನಿವಾಸಿ ಕನ್ನಡಿಗರ ವಿಶೇಷ

ಮಸ್ಕತ್ ಒಮಾನ್: ಝೈನ್ ಮಲ್ಟಿಮೀಡಿಯಾದ 2 ನೇ ಶಾಖೆ ಉದ್ಘಾಟನೆ

ವರದಿಗಾರ (ಎ.01): ಇತ್ತೀಚೆಗೆ ಮಸ್ಕತ್ ರೂವಿಯಲ್ಲಿ ಒಮಾನ್ ನ ಮೊದಲ ಶಾಖೆಯನ್ನು ತೆರೆದು ಅತೀ ಕಡಿಮೆ ಬೆಲೆಯೊಂದಿಗೆ ಮತ್ತು ಅತ್ಯುತ್ತಮ ಸೇವೆಯೊಂದಿಗೆ ಜನ ಮನಸ್ಸನ್ನು ಗೆದ್ದು ಯಶಸ್ವಿಯಾದ ಝೈನ್ ಮಲ್ಟಿಮೀಡಿಯ ಕಂಪೆನಿಯು ತನ್ನ ದ್ವಿತೀಯ ಶಾಖೆಯನ್ನು ಒಮಾನ್ ನ ಇಬ್ರಿಯಲ್ಲಿ ಪ್ರಾರಂಭಿಸಿದೆ.
ಸ್ಥಳೀಯ ರಾಯಲ್ ಒಮಾನ್ ಪೋಲೀಸ್ ಅಧಿಕಾರಿ ಅಹ್ಮದ್ ಸಾಲಿಂ ಶಕೀಲೀ ಬಿನ್ ಅಹ್ಮದ್ ಶಾಖೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಆಧುನಿಕ ಯುಗದಲ್ಲಿ ಅನಿವಾರ್ಯವಾಗಿರುವ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮುಂತಾದ ವೇಗದೂತ ಇಲೆಕ್ಟ್ರಾನಿಕ್ ಉಪಕರಣಗಳು ರಖಂ ಮತ್ತು ಚಿಲ್ಲರೆ ದರದಲ್ಲಿ ಲಭ್ಯವಿರುವುದಲ್ಲದೆ ಎಷ್ಟೇ ಕ್ಲಿಷ್ಟಕರವಾದ ಸ್ಮಾರ್ಟ್ ಫೋನುಗಳನ್ನೂ ಕೂಡ ರಿಪೇರಿ ಮಾಡಿಕೊಡಲಾಗುವುದೆಂದು ಝೈನ್ ಮಲ್ಟಿಮೀಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ನಝೀರ್ ಕೊಡಿಂಬಾಡಿ ತಿಳಿಸಿದ್ದಾರೆ.
ಸಂಸ್ಥೆಯ ಕಾರ್ಯ ನಿರ್ವಾಹಕರಾದ ಉಮ್ಮರ್ ಫಾರೂಕ್ ಕೂರ್ನಡ್ಕ, ಫಯಾಝ್.ಎನ್ ಉಪ್ಪಿನಂಗಡಿ, ಅನ್ಸಾರ್ ಕಾಟಿಪಳ್ಳ, ಸುಹೈಲ್ ಆತೂರ್ ಮತ್ತಿತರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group