ರಾಷ್ಟ್ರೀಯ ಸುದ್ದಿ

ಕುರುಡ ಮುಸ್ಲಿಮ್ ದಂಪತಿಗಳಿಗೆ ‘ಜೈ ಶ್ರೀರಾಮ್’ ಹೇಳುವಂತೆ ಬಲವಂತ ಪಡಿಸಿದ ಹಿಂದುತ್ವ ಭಯೋತ್ಪಾದಕರು!!

ಮತಾಂಧತೆ ಹಾಗೂ ಭಯೋತ್ಪಾದನೆಯಲ್ಲಿ ಐಸಿಸ್ ಗೆ ಸ್ಪರ್ಧೆಯೊಡ್ಡುತ್ತಿದ್ದಾರೆಯೇ ಹಿಂದುತ್ವವಾದಿಗಳು??

ವರದಿಗಾರ : ರಾಮನವಮಿ ಆಚರಣೆಯ ಸಂಧರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ನಲುಗುತ್ತಿರುವ ಪಶ್ಚಿಮ ಬಂಗಾಳ ರಾಜ್ಯದ ಆಘಾತಕಾರಿ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಹಿಂದುತ್ವವಾದಿಗಳು ಕುರುಡ ಮುಸ್ಲಿಮ್ ಭಿಕ್ಷುಕ ದಂಪತಿಗಳನ್ನು ‘ಜೈ ಶ್ರೀರಾಮ್’ ಹೇಳುವಂತೆ ಬಲವಂತ ಪಡಿಸುತ್ತಿರುವುದು ಕಂಡುಬರುತ್ತಿದೆ. ತಾವು ಕುರುಡರೆಂದೂ, ತಮಗೆ ಸರಿಯಾಗಿ ನಡೆಯಲೂ ಸಾಧ್ಯವಾಗುತ್ತಿಲ್ಲವೆಂದು ದಂಪತಿಗಳು ಬೇಡಿಕೊಂಡರೂ ಮತಾಂಧತೆಯ ಅಮಲೇರಿಸಿಕೊಂಡಿದ್ದ ರಾಕ್ಷಸರ ಕಿವಿಗೆ ಬೀಳಲೇ ಇಲ್ಲ. “ಕಾಣುವುದಿಲ್ಲದಿದ್ದರೇನು? ‘ಜೈ ಶ್ರೀರಾಮ್’ ಹೇಳಲು ನಿನ್ನ ಕಣ್ಣನ್ನು ಉಪಯೋಗಿಸಬೇಕಾಗಿಲ್ಲ, ಬಾಯಿಯಿಂದ ಹೇಳು” ಎಂದು ರಾಕ್ಷಸರಲ್ಲೊಬ್ಬನು ಪ್ರತಿಕ್ರಿಯಿಸುತ್ತಾನೆ.

ಕುರುಡ ಭಿಕ್ಷುಕನ ಕೈಯಲ್ಲಿ ಭಗವಾ ಧ್ವಜವನ್ನು ಬಲವಂತವಾಗಿ ಹಿಡಿಸಲಾಗಿರುವುದೂ ಕಂಡುಬರುತ್ತಿದೆ. ಹಿಂದೂ -ಮುಸ್ಲಿಮ್ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲವೆಂದೂ, ಅಲ್ಲಾಹ್ ಹಾಗೂ ಭಗವಾನ್ ಒಂದೇ ಎಂದು ಹೇಳಿದರೂ ಕರಗದ ಕಲ್ಲು ಹೃದಯಗಳನ್ನು ಹೊತ್ತ ಹಿಂದುತ್ವವಾದಿಗಳು ಆತನನ್ನು ಥಳಿಸುವ ಬೆದರಿಕೆಯೊಡ್ಡುತ್ತಾರೆ. ಕೊನೆಗೆ ವೃದ್ಧ ಮುಸ್ಲಿಮ್ ಅವರ ಬೆದರಿಕೆಗೆ ಮಣಿದು ‘ಜೈ ಶ್ರೀರಾಮ್’ ಹೇಳುತ್ತಾನೆ.

ವೀಡಿಯೋ ವೀಕ್ಷಿಸಿ:

ಸೂಚನೆ: ಈ ವೀಡಿಯೋದಲ್ಲಿರುವ ಘಟನೆ ನಡೆದ ನಿಶ್ಚಿತ ಸ್ಥಳ ಹಾಗೂ ದಿನಾಂಕವನ್ನು ತಿಳಿಯಲು ಸಾಧ್ಯವಾಗದಿದ್ದರೂ, ಅಪರಾಧಿಗಳು ಹಾಗೂ ವೃದ್ಧ ದಂಪತಿಗಳು ಆಡುವ ಭಾಷೆಯ ಮುಖಾಂತರ ಹಾಗೂ ಸಾಮಾಜಿಕ ಜಾಲತಾಣಗಳ ವರದಿಯ ಪ್ರಕಾರ ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಸಂಶಯಿಸಲಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group