ರಾಷ್ಟ್ರೀಯ ಸುದ್ದಿ

ರಾಮ ನವಮಿ ಹಿಂಸಾಚಾರದ ಸಂದರ್ಭ ತನ್ನ ವಿರುದ್ಧ ಘೋಷಣೆ ಕೂಗಿದವರ ಜೀವಂತ ಚರ್ಮ ಸುಲಿಯುತ್ತೇನೆ ಎಂದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ

ವರದಿಗಾರ (ಮಾ.31): ರಾಮ ನವಮಿ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಏಕೈಕ ಕಾರಣಕ್ಕಾಗಿ ‘ಜೀವಂತ ಚರ್ಮ ಸುಲಿಯುತ್ತೇನೆ’ ಎಂದು ಕೇಂದ್ರ ಬಿಜೆಪಿ ಸಚಿವ ಬಾಬುಲ್ ಸುಪ್ರಿಯೊ ಬೆದರಿಕೆ ಹಾಕಿದ್ದಾರೆ.

ಮೂಲಗಳ ವರದಿಗಳ ಪ್ರಕಾರ, ಬಾಬುಲ್ ಸುಪ್ರಿಯೊ ಗುರುವಾರದಂದು ಅಸನ್ಸೋಲ್‌ನ ಕಲ್ಯಾಣಪುರದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಲು ತೆರಳಿದಾಗ ಪೊಲೀಸರು ಅವರನ್ನು ತಡೆದಿದ್ದರು. ಸುಪ್ರಿಯೊ ವಿರುದ್ಧ ಐಪಿಸಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಉಲ್ಲಂಘನೆ, 146, 147,148 (ದಂಗೆ) ಮತ್ತು 353 ಸೆಕ್ಷನ್ ಅಡಿ ಸಚಿವರ ವಿರುದ್ಧ ದೂರು ದಾಖಲಿಸಲಾಗಿತ್ತು. ಸರಕಾರಿ ಅಧಿಕಾರಿ ಮೇಲೆ ಹಲ್ಲೆಯು ಜಾಮೀನು ರಹಿತ ಅಪರಾಧವಾಗಿದೆ.
ಘಟನೆ ಬಗ್ಗೆ  ಪ್ರತಿಕ್ರಿಯಿಸಿರುವ ಸಚಿವ ಸುಪ್ರಿಯೊ, ಘಟನೆ ನಡೆದ ಸ್ಥಳದಲ್ಲಿ ಎರಡು-ಮೂರು ಮಂದಿ ಟಿಎಂಸಿಯ ಕಾರ್ಯಕರ್ತರಿದ್ದರು. ಅವರು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದರು. ಅಲ್ಲಿ ಎರಡು ವೃದ್ಧೆಯರು ಅಳುವುದನ್ನು ಕಂಡು ನಾನು ನನ್ನ ವಾಹನ ನಿಲ್ಲಿಸಿದೆ. ಅವರು ನನ್ನಲ್ಲಿ ಮಾತನಾಡಲು ಬಯಸಿದ್ದರು. ಆದರೆ ದುಷ್ಕರ್ಮಿಗಳು ಆ ಮಹಿಳೆಯರನ್ನು ದೂರ ದೂಡಿದರು. ಪೊಲೀಸರಿಗೆ ಅವರನ್ನು ತಡೆಯಬಹುದಿತ್ತು. ಆದರ ಬದಲಾಗಿ ಅವರು ನನ್ನನ್ನೇ ತಡೆದಿದ್ದಾರೆ ಎಂದು ಹೇಳಿದ್ದಾರೆ.

ಚರ್ಮ ಸುಲಿಯುತ್ತೇನೆ ಎಂದು ನಾನು ಹೇಳಿರುವುದು ‘ಆ ಕ್ಷಣದ ಕೋಪದಿಂದ’ ಎಂದು ಬಿಜೆಪಿ ಕೇಂದ್ರ ಸಚಿವ ಹೇಳಿಕೊಂಡಿದ್ದಾರೆ. ಅಸನ್ಸೋಲ್ ಗಲಭೆಗೆ ಸಂಬಂಧಪಟ್ಟಂತೆ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group