ಸುತ್ತ-ಮುತ್ತ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲೆ ಹಾಗೂ ಸಾಲ್ಮರ ವಲಯದ ವತಿಯಿಂದ ಮನೆ ಕೀ ಹಸ್ತಾಂತರ

ಪುತ್ತೂರು: ಸಾಲ್ಮರ ಕೆರೆಮೂಲೆ ಎಂಬಲ್ಲಿ ಅನಾಥರಾಗಿರುವ ಹಾಜೀರಾ ತಾರಿಗುಡ್ಡೆ ಎಂಬವರ ಕುಟುಂಬಕ್ಕೆ ಆಸರೆಯಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲೆ ಹಾಗೂ ಸಾಲ್ಮರ ವಲಯದ ವತಿಯಿಂದ ದಿನಾಂಕ 29/03/2018 ರಂದು ಹೊಸ ಮನೆಯನ್ನು ನೀಡುವುದರ ಮೂಲಕ ಮನೆ ಕೀಯನ್ನು ಕರಾವಳಿ ಝೋನಲ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಗೂ ಪುತ್ತೂರು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ರಿಜ್ವಾನ್ ರವರು ಮನೆ ಕೀ ಯನ್ನು ಹಸ್ತಾಂತರಿಸುವುದರೊಂದಿಗೆ ಉದ್ಘಾಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಝೋನಲ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಹಾಗೂ ಸಾಲ್ಮರ ಜಮಾಅತಿನ ಖತೀಬ್ ರದ ಉಮರ್ ದಾರಿಮಿ, ಸರ್ಫುದ್ದೀನ್ ತಂಗಳ್ ಸಾಲ್ಮರ, ಹಾಗೂ ಹಮೀದ್ ಸಾಲ್ಮರ, ಸಮುದಾಯಕ್ಕೆ ಉತ್ತಮ ಸಂದೇಶವನ್ನು ನೀಡಿದರು .ಈ ಸಂದರ್ಭದಲ್ಲಿ SDPI ಜಿಲ್ಲಾ ಉಪಾಧ್ಯಕ್ಷರಾದ ಕೆಎ ಸಿದ್ದೀಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಇಕ್ಬಾಲ್ ಬೆಳ್ಳಾರೆ ,ಪುತ್ತೂರು ಸಿಟಿ ಡಿವಿಷನ್ ಅಧ್ಯಕ್ಷರಾದ ಅಜೀಜ್ ಕಬಕ,ಸಯ್ಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್, APMC ಮಸೀದಿಯ ಅಧ್ಯಕ್ಷರಾದ ಯಹ್ಯಾ ಸಾಲ್ಮರ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಾಲ್ಮರ ವಲಯಾಧ್ಯಕ್ಷರಾದ ಆಸೀಫ್ ಸಾಲ್ಮರ ,ಅಲೀ ಸಾಲ್ಮರ, ಹಾಗು ಹಲವಾರು ನಾಯಕರು ಉಪಸ್ಥಿತರಿದ್ದರು. ಉಸ್ಮಾನ್ ಸಾಲ್ಮರ ಕಾರ್ಯಕ್ರಮವನ್ನು ಸ್ವಾಗತಿಸಿ,ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group