ದುಬೈ ನೆಲ್ಯಾಡಿ ಫ್ರೆಂಡ್ಸ್ ಅಧ್ಯಕ್ಷರಾಗಿ ಶಾಹುಲ್ ನೆಲ್ಯಾಡಿ,ಕಾರ್ಯದರ್ಶಿಯಾಗಿ ರಝಕ್ ಕೊಕ್ಕಡ ಆಯ್ಕೆ

ವರದಿಗಾರ (ಮಾ 24): ಯು ಎ ಇ ಯ ವಿವಿಧ ಭಾಗದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಕನ್ನಡಿಗರಾದ ನೆಲ್ಯಾಡಿಗರ ಸಂಘಟನೆಯಾದ ದುಬೈ ನೆಲ್ಯಾಡಿ ಫ್ರೆಂಡ್ಸ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 23/03/2018 ರಂದು ದುಬೈ ಯ ಅಲ್ ಕೂಜ್ ನಲ್ಲಿ ಶಾಹುಲ್ ಹಮೀದ್ ನೆಲ್ಯಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಪ್ಪಿ ಹಾಲಿ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.ನಂತರ ೨೦೧೮ ಮತ್ತು ೧೯ ನೇ ಸಾಲಿಗೆ ನೂತನ ಕಮಿಟಿ ರಚಿಸಲಾಯಿತು,ಅದರಂತೆ ಮುಂದಿನ ಚಾಲ್ತಿ ವರ್ಷಕ್ಕೆ ಅಧ್ಯಕ್ಷರಾಗಿ ಶಾಹುಲ್ ಹಮೀದ್ ನೆಲ್ಯಾಡಿ,ಉಪಾಧ್ಯಕ್ಷರಾಗಿ ಇಸಾಕ್ ಸಾಹೇಬ್ ಕೌಕ್ರಾಡಿ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಕ್ ಕೊಕ್ಕಡ,ಜತೆ ಕಾರ್ಯದರ್ಶಿಯಾಗಿ ಗಫ್ಫಾರ್ ಕೆ ಇ,ಹಾಗು ಕೋಶಾಧಿಕಾರಿಯಾಗಿ ಕಮಲ್ ನೆಲ್ಯಾಡಿ ಆಯ್ಕೆಯಾದರು.ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝರ್ ನೆಲ್ಯಾಡಿ,ಜಲೀಲ್ ಬ್ಯಾರಿ ಮೂರಂಕಲ,ರಫೀಕ್ ಅಪ್ಪಿ ಮತ್ತು ಕಲಂದರ್ ನೆಲ್ಯಾಡಿ ನೇಮಿಸಲ್ಪಟ್ಟರು.
ಮುಂದಿನ ಚಾಲ್ತಿ ವರ್ಷದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಮಸೀದಿ ಹಾಗು ಮದ್ರಸ ಕಟ್ಟಡಗಳ ನಿರ್ಮಾಣ ಹಾಗು ಇನ್ನಿತರ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಚಾಲ್ತಿ ವರ್ಷದಲ್ಲಿ ಪೂರೈಸುವ ಸಲುವಾಗಿ ಕಾರ್ಯ ಯೋಜನೆ ಮಾಡಲಾಯಿತು.ಸಭೆಯಲ್ಲಿ ಅಝರ್ ನೆಲ್ಯಾಡಿ ಪ್ರಾಸ್ತಾವಿಕ ಮಾತನಾಡಿದರು,ರಫೀಕ್ ಅಪ್ಪಿ ಸ್ವಾಗತಿಸಿ,ಗಫಾರ್ ಕೆ ಇ ಧನ್ಯವಾದ ಸಮರ್ಪಿಸಿದರು.
ವರದಿ : ಹಕ್ ನೆಲ್ಯಾಡಿ ಮಕ್ಕಾ

