ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶ: ಕಾಲು ಕಳೆದುಕೊಂಡವನಿಗೆ ಮುರಿದ ಕಾಲನ್ನೇ ತಲೆದಿಂಬಾಗಿಸಿದ ಆಸ್ಪತ್ರೆ ಸಿಬ್ಬಂದಿಗಳು

ಯೋಗಿ ರಾಜ್ಯದಲ್ಲಿ ಸುಧಾರಣೆಯಾಗದ ಆರೋಗ್ಯ ಇಲಾಖೆ!!

ಕರ್ನಾಟಕದ ಮುಖ್ಯಮಂತ್ರಿಗೆ ಆಡಳಿತದ ಪಾಠ ಹೇಳಿಕೊಡಲು ಬಂದಿರುವ ಯೋಗಿಯ ರಾಜ್ಯದ ಆಸ್ಪತ್ರೆಗಳಲ್ಲಿ ಮುಂದುವರಿಯುತ್ತಿರುವ ರೋಗಿಗಳ ದಯನೀಯ ಸ್ಥಿತಿ

ವರದಿಗಾರ(11-03-2018): ಚುನಾವಣೆ ಹತ್ತಿರವಿರುವ ಎಲ್ಲಾ ರಾಜ್ಯಗಳಲ್ಲೂ ಭಾಷಣ ಮಾಡಲು ಬರುತ್ತಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ವಿಫಲತೆಯನ್ನು ಎತ್ತಿ ತೋರಿಸುವ ಮತ್ತೊಂದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಝಾನ್ಸಿ ಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಕಾಲು ಕಳೆದುಕೊಂಡು ಗಂಭೀರ ಪರಿಸ್ಥಿತಿಯಲ್ಲಿರುವ ಯುವಕನೋರ್ವನ ತಲೆಯಡಿಗೆ ತಲೆದಿಂಬು ಇಡದೆ, ಆತನ ಮುರಿದ ಕಾಲನ್ನೇ ತಲೆದಿಂಬಾಗಿಸಿದ ದೃಶ್ಯವು ಎಂಥಹಾ ಕಲ್ಲು ಹೃದಯವನ್ನೂ ಕರಗಿಸಬಹುದು.

ವೀಡಿಯೋ ವೀಕ್ಷಿಸಿ:

ವೃತ್ತಿಯಲ್ಲಿ ಶಾಲಾ ಬಸ್ಸೊಂದರಲ್ಲಿ ಕ್ಲೀನರ್ ಆಗಿರುವ ಯುವಕನನ್ನು ಅಪಘಾತದಲ್ಲಿ ತನ್ನ ಕಾಲು ಮುರಿದುಕೊಂಡಾಗ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಲಾಯಿತು. ಪ್ರಥಮ ಚಿಕಿತ್ಸೆಯ ನಂತರ ಆತನನ್ನು ಝಾನ್ಸಿಯ ಮಹಾರಾಣಿ ಲಕ್ಷ್ಮೀ ಬಾಯಿ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಯಿತು. ಅಲ್ಲಿ ಎಮೆರ್ಜೆನ್ಸಿ ವಾರ್ಡಿ’ನಲ್ಲಿ ದಾಖಲಾದ ಯುವಕನ ತಲೆ ಏರಿಸಿ ಮಲಗಿಸಬೇಕೆಂದು ವೈದ್ಯರು ಹೇಳಿದಾಗ, ಆಸ್ಪತ್ರೆಯ ಸಿಬ್ಬಂದಿಗಳು ಆತನ ಮುರಿದ ಕಾಲನ್ನೇ ಅತನಿಗೆ ತಲೆದಿಂಬಾಗಿಸಿದರು.

ಪ್ರಕರಣವು ಬೆಳಕಿಗೆ ಬಂದ ನಂತರ ತನಿಖೆಗಾಗಿ ನಾಲ್ವರು ಸದಸ್ಯರ ಆಯೋಗವನ್ನು ನೇಮಿಸಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಓರ್ವ ವೈದ್ಯರು ಹಾಗೂ ಇನ್ನಿಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಯೋಗಿ ಆದಿತ್ಯನಾಥ್ ದಯನೀಯ ಸ್ಥಿತಿಯಲ್ಲಿರುವ ತನ್ನ ರಾಜ್ಯವನ್ನು ಮರೆತು ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಡಳಿತದ ಬಗ್ಗೆ ಪಾಠ ಹೇಳಿಕೊಡುತ್ತಿರುವುದು ವಿಪರ್ಯಾಸ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group