ರಾಜ್ಯ ಸುದ್ದಿ

ಲೋಕಾಯುಕ್ತರ ಮೇಲೆ ಹಲ್ಲೆಗೆ ಭದ್ರತಾ ಲೋಪವೇ ಪ್ರಮುಖ ಕಾರಣ : ಎಸ್ ಡಿ ಪಿ ಐ

ವರದಿಗಾರ (ಮಾ.8):  ಲೋಕಾಯುಕ್ತ ನ್ಯಾಯ ಮೂರ್ತಿ ವಿಶ್ವನಾಥ ರವರು ಕರ್ತವ್ಯದಲ್ಲಿದ ಸಂದರ್ಭದಲ್ಲೇ  ಅವರ ಮೇಲೆ  ಹಲ್ಲೆಯಾಗಿರುವುದು ಅತ್ಯಂತ ಖಂಡನೀಯ ಹಾಗೂ ಈ ಘಟನೆಗೆ ಭದ್ರತಾ ಲೋಪವೇ ಪ್ರಮುಖ ಕಾರಣ ಆದ ಕಾರಣ ಭದ್ರತಾ ಲೋಪ ವೆಸಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮೇಲೆ ನಿರ್ಧಾಕ್ಷಣ್ಯ ಕ್ರಮ ಜರುಗಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ನ್ಯಾಯ ಮೂರ್ತಿಗಳಿಗೆ ರಕ್ಷಣೆ ಇಲ್ಲವೆಂದಾದರೆ ಇನ್ನು ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ ಹನ್ನಾನ್ ಮುಂದುವರಿಯುತ್ತಾ ಸರ್ಕಾರ ಈ ಕೂಡಲೇ ಎಲ್ಲಾ ಅಧಿಕಾರಿಗಳಿಗೆ ರಕ್ಷಣೆ ನೀಡುವಂತಹ ಕಾರ್ಯಕ್ಕೆ ಆದ್ಯತೆ ನೀಡ ಬೇಕು. ಯಾವ ಕಾರಣಕ್ಕೂ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ  ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

To Top
error: Content is protected !!
WhatsApp chat Join our WhatsApp group