ರಾಜ್ಯ ಸುದ್ದಿ

ಇದೇನು ಗೂಂಡಾ ರಾಜ್ಯವೇ?: ಮಾಜಿ ಪ್ರಧಾನಿ ದೇವೇಗೌಡ

ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಹತ್ಯಾ ಯತ್ನ ಘಟನೆಗೆ ಮಾಜಿ ಪ್ರಧಾನಿ ಪ್ರತಿಕ್ರಿಯೆ

ವರದಿಗಾರ (ಮಾ.07): ಲೋಕಾಯುಕ್ತ ಕಚೇರಿಯಲ್ಲೇ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕುವಿನಿಂದ ಇರಿದು ಹತ್ಯಾ ಯತ್ನ ಘಟನೆಯ ಬಗ್ಗೆ ಪ್ರತಿಕ್ರಿಯಿಸುವ ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ಹೆಚ್.ಡಿ. ದೇವೇಗೌಡ, ನ್ಯಾಯಾಮೂರ್ತಿಗೆ ವ್ಯಕ್ತಿಯೊಬ್ಬ ಚಾಕುವುನಿಂದ ಇರಿಯುತ್ತಾನೆ ಎಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ? ಎಂದು ಕೇಳಿರುವ ಅವರು ಇದೇನು ಗೂಂಡಾ ರಾಜ್ಯವೇ ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಂಗಳೂರಿನ ಜೆ.ಪಿ.ಭವನದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯ ಸರಕಾರ ಲೋಕಾಯುಕ್ತವನ್ನು ಮುಗಿಸಿತು. ಇದೀಗ ಲೋಕಾಯುಕ್ತ ನ್ಯಾಯಾಮೂರ್ತಿ ಮೇಲೆಯೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಲೋಕಾಯುಕ್ತರಿಗೆ ರಕ್ಷಣೆ ಇಲ್ಲದ ಮೇಲೆ ಮತ್ತೆ ಯಾರಿಗೆ ಇವರು ರಕ್ಷಣೆ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group