ರಾಷ್ಟ್ರೀಯ ಸುದ್ದಿ

ತ್ರಿಪುರಾ: ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಿದ ಬಿಜೆಪಿ ಕಾರ್ಯಕರ್ತರು

ವರದಿಗಾರ(06-03-2018): ತ್ರಿಪುರಾದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯದ 48 ಗಂಟೆಗಳ ಬಳಿಕ, ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಕಮ್ಯೂನಿಸ್ಟ್ ಕ್ರಾಂತಿಕಾರಿ ಲೆನಿನ್ ಪ್ರತಿಮೆಯನ್ನು ನೆಲಸಮವಾಗಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದ ಬೆಲೋನಿಯಾ ನಗರದ ಕಾಲೇಜು ಚೌಕದಲ್ಲಿದ್ದ ಲೆನಿನ್ ಪ್ರತಿಮೆಯನ್ನು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳೊಂದಿಗೆ ನೆಲಸಮ ಮಾಡಲಾಯಿತು.

ಪ್ರತಿಮೆಯನ್ನು ನೆಲಸಮವಾಗಿಸುವ ಚಿತ್ರವನ್ನು ಬಿಜೆಪಿ ಕಾರ್ಯದರ್ಶಿ ರಾಮ ಮಾಧವರು ಟ್ವೀಟ್ ಮಾಡಿದ್ದಾರೆ. ತನ್ನ ಕಾರ್ಯಕರ್ತರ ಕೃತ್ಯವನ್ನು ಖಂಡಿಸದೆ, ಅದನ್ನು ಸಾಧನೆಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿರುವುದು ಬಿಜೆಪಿ ನಾಯಕನ ಮನೋಸ್ಥಿತಿಯನ್ನು ತೋರಿಸುತ್ತಿದೆ.

ತ್ರಿಪುರಾದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 43 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ, 25 ವರ್ಷಗಳ ಕಮ್ಯೂನಿಸ್ಟ್ ಅಧಿಕಾರಕ್ಕೆ ಅಂತ್ಯ ಹಾಡಿದವು.

ಲೆನಿನ್ ಪ್ರತಿಮೆ ನೆಲಸಮವಾಗಿಸುವ ವೀಡಿಯೋ ವೀಕ್ಷಿಸಿ:

1 Comment

1 Comment

  1. Pingback: ತಮಿಳುನಾಡು: ಪೆರಿಯಾರ್ ಪ್ರತಿಮೆ ಹಾನಿಗೊಳಿಸಿದ ದುಷ್ಕರ್ಮಿಗಳು - ವರದಿಗಾರ

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group