ಸಾಮಾಜಿಕ ತಾಣ

ತ್ರಿಪುರ ಚುನಾವಣಾ ಫಲಿತಾಂಶದ ನಂತರ ಮತಯಂತ್ರದ ದುರ್ಬಳಕೆಯ ಕುರಿತಾಗಿರುವ ಸಂಶಯ ಬಲವಾಗುತ್ತಿದೆ : ಮಹೇಂದ್ರ ಕುಮಾರ್

ವರದಿಗಾರ (ಮಾ.03) : ಪ್ರತಿಯೊಂದು ರಾಜ್ಯಗಳ ಚುನಾವಣೆಯ ನಂತರ ಜನರೇನೇ ಹೇಳುತ್ತಿದ್ದರೂ ನನಗೆ ಚುನಾವಣಾ ಮತಯಂತ್ರ (ಇವಿಎಂ) ಬಗ್ಗೆ ನನಗೆ ಇದುವರೆಗೆ ಅನುಮಾನ ಬಂದಿರಲಿಲ್ಲ. ಆದರೆ ಇಂದಿನ ತ್ರಿಪುರಾ ರಾಜ್ಯದ ವಿಧಾನಸಭಾ ಚುನಾವಣೆಯ ನಂತರ ನನಗೆ ಮತಯಂತ್ರದ ಬಗ್ಗೆ ಜನರಿಗಿರುವ ಸಂಶಯದಂತೆ ನನಗೂ ಅನುಮಾನ ಕಾಡಲಾರಂಭಿಸಿದೆ ಎಂದು ದಕ್ಷಿಣ ಕನ್ನಡ  ಭಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು  ಹಾಕಿರುವ ಮಹೇಂದ್ರ ಕುಮಾರ್, ತ್ರಿಪುರಾದ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ರಂತಹಾ ನಿಸ್ವಾರ್ಥ ರಾಜಕಾರಣಿಯೊಬ್ಬರ ಸರ್ಕಾರ ಸೋಲನುಭವಿಸಿದೆ ಎಂದರೆ ನಂಬಲು ಸಾಧ್ಯವಿಲ್ಲ. ಅವರಂತಹಾ ರಾಜಕಾರಣಿಯೊಬ್ಬರನ್ನು ಇಡೀ ರಾಷ್ಟ್ರದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಅಂತಹಾ ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದೆ ಎಂದರೆ ಅದು ಅನುಮಾನಾಸ್ಪದ. ಅವರ ಸೋಲು ಅದು ಪ್ರಜಾಪ್ರಭುತ್ವದ ಸೋಲು ಮಾತ್ರವಲ್ಲ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ ಎಂಬ ಭಯ ನನಗೆ ಕಾಡಲಾರಂಭಿಸಿದೆ ಎಂದು ಬರೆದಿದ್ದಾರೆ.

ಅವರ ಪೋಸ್ಟ್ ಕೆಳಗಿನಂತಿದೆ

“ಯಾರು ಎಷ್ಟೇ ಕೂಗಾಡಿದರೂ ನನಗೆ ಇವಿಎಂ ಮಿಷನ್ ಬಗ್ಗೆ ಅನುಮಾನ ಬಂದಿರಲಿಲ್ಲ .ಆದರೆ ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ಸರ್ಕಾರ ಸೋತ ಮೇಲೆ .ಅಂತಹ ಸ್ಟೇಟ್ ನಲ್ಲಿ ಬಿಜೆಪಿ ಅರಳಿದ ಮೇಲೆ ಯಾಕೋ ಅನುಮಾನ ಕಾಡಲಾರಂಭಿಸಿದೆ ..ಯಾಕೆಂದರೆ ಮಾಣಿಕ್ ಸರ್ಕಾರ್ ರಂಥ ಒಬ್ಬ ರಾಜಕಾರಣಿ ಇಡೀ ರಾಷ್ಟ್ರದಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ ಅಂತಹ ಜೀವನ ತಪಸ್ಸು ಯಾರಿಂದಲೂ ಸಾಧ್ಯವಿಲ್ಲ ಮಾಣಿಕ್ ಸರ್ಕಾರ್ ಸೋಲು ಪ್ರಜಾಪ್ರಭುತ್ವದ ಸೋಲು. ಯಾಕೋ ಭಯ ಕಾಡಲಾರಂಭಿಸಿದೆ ಪ್ರಜಾಪ್ರಭುತ್ವ ಅಪಾಯದಲ್ಲಿದೆಯ?”

 

To Top
error: Content is protected !!
WhatsApp chat Join our WhatsApp group