ಹನಿ ಸುದ್ದಿ

ಕಾಸರಗೋಡು: ರಿಯಾಝ್ ಮೌಲವಿ ಹತ್ಯೆಯ ವಿಚಾರಣೆಗೆ ಹೈಕೋರ್ಟ್ ತಡೆ

ವರದಿಗಾರ(02-03-2018): ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರಿಂದ ಹತ್ಯೆಗೀಡಾಗಿದ್ದ ಕಾಸರಗೋಡಿನ ರಿಯಾಝ್ ಮೌಲವಿ ಹತ್ಯೆಯ ತನಿಖೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಕರಣವನ್ನು UAPA ಕಾಯ್ದೆಯ ಪ್ರಕಾರ ವಿಚಾರಣೆ ನಡೆಸುವಂತೆ ಕೋರಿ ರಿಯಾಝ್ ಮೌಲವಿಯ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿದೆ.

ಕರ್ನಾಟಕದ ಮಡಿಕೇರಿ ನಿವಾಸಿಯಾಗಿದ್ದ ರಿಯಾಝ್ ಮೌಲವಿ ಕಾಸರಗೋಡು ಸಮೀಪದ ಚೂರಿಯ ಇಸ್ಲಾತುಲ್ ಇಸ್ಲಾಂ ಮದ್ರಸಾದಲ್ಲಿ ಶಿಕ್ಷಕರಾಗಿದ್ದರು. ಕಳೆದ ವರ್ಷ ಮಾರ್ಚ್ 20ರಂದು ಚೂರಿಯ ಮುಹಿಯುದ್ದೀನ್ ಜುಮಾ ಮಸೀದಿ ಬಳಿಯ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಅವರನ್ನು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಬರ್ಬರವಾಗಿ ಹತ್ಯೆ ಮಾಡಿದ್ದರು.

To Top
error: Content is protected !!
WhatsApp chat Join our WhatsApp group