ಜಿಲ್ಲಾ ಸುದ್ದಿ

ವೆಸ್ಟರ್ನ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಂಚನೆ ಕ್ಯಾಂಪಸ್ ಫ್ರಂಟ್ ನಿಂದ ದೂರು ದಾಖಲು

ವರದಿಗಾರ (ಫೆ 28) : ಮಂಗಳೂರಿನ ಕದ್ರಿ ಹಿಲ್ಸ್ ಬಳಿಯ ವೆಸ್ಟರ್ನ್ ವಿದ್ಯಾಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಸೇಫ್ಟಿ ಮುಂತಾದ ಕೋರ್ಸ್‍ಗಳನ್ನು ಅಧ್ಯಯನ ಮಾಡಿರುವ 2016-17 ರ ಅವಧಿಯಲ್ಲಿ ದಾಖಲಾಗಿರುವ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ವಂಚನೆಗೊಳಗಾಗಿದ್ದಾರೆ. ಸಂಸ್ಥೆಯ ನಿಯಮದಂತೆ ಕಾಲೇಜಿನಲ್ಲಿ ಕೋರ್ಸ್ ಮುಗಿದ ಮೇಲೆ ಉದ್ಯೋಗ ಖಾತರಿ ,ತರಬೇತಿ ಮತ್ತು ಅಂತರಾಷ್ಟ್ರೀಯ ಮಾನ್ಯತೆ ಪಡೆದಂತಹ ನೆಬೋಶ್,ಅಯೋಶ್, ಫ್ರಾಂಕ್‍ಫಿನ್‍ನಂತಹ ಕೋರ್ಸ್‍ಗಳ ಸರ್ಟಿಫಿಕೇಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಿದ್ಯಾರ್ಥಿಗಳ ಕೋರ್ಸ್ ಮುಗಿದು ವರ್ಷಗಳು ಕಳೆದರೂ ಸಂಸ್ಥೆಯು ಯಾವುದೇ ಭರವಸೆಯನ್ನು ಪೂರೈಸಲಿಲ್ಲ. ಈ ಮೊದಲೇ ಎಲ್ಲಾ ಕೋರ್ಸ್‍ಗಳಿಗೆ ವಿಶ್ವವಿದ್ಯಾನಿಲಯ ಮಾನ್ಯತೆ ಹೊಂದಿದ ಕೆ.ಎಸ್.ಒ.ಯು ಸರ್ಟಿಫಿಕೇಟ್ ದೊರಕಬೇಕಾಗಿದ್ದು, ಯು.ಜಿ.ಸಿ ಯು ಕೆ.ಎಸ್.ಒ.ಯುನ ಮಾನ್ಯತೆ ರದ್ದು ಮಾಡಿದ್ದರಿಂದ ವಿದ್ಯಾರ್ಥಿಗಳು ಅತಂತ್ರಗೊಂಡಿದ್ದರು. ಇದೀಗ ಕಾಲೇಜಿನ ಈ ನಡೆಯು ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ. ಯಾವುದೇ ಕಂಪನಿಗಳಿಗೆ ಉದ್ಯೋಗಕ್ಕೆಂದು ಅರಸಿ ಹೋದಾಗ ಕಂಪನಿಯು ಉದ್ಯೋಗಕ್ಕೆ ಬೇಕಾದಂತಹ ಪೂರಕ ದಾಖಲೆಗಳು ಕೇಳುವಾಗ ವಿದ್ಯಾರ್ಥಿಗಳು ನಿರಾಶರಾಗಿ ವಾಪಸ್ಸಾಗುತ್ತಿದ್ದಾರೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ವಾಹಕರನ್ನು ಸಂಪರ್ಕಿಸಿದಾಗ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಕಾಲೇಜಿನ ಆಡಳಿತ ಮಂಡಳಿಯ ಮೋಸದಾಟದಿಂದ ವಿದ್ಯಾರ್ಥಿಗಳು ಬೀದಿಪಾಲಾಗಿದ್ದಾರೆ. ಈ ಬಗ್ಗೆ ಕ್ಯಾಂಪಸ್ ಫ್ರಂಟ್ ನೇತ್ರತ್ವದಲ್ಲಿ ಪೊಲೀಸ್ ಆಯುಕ್ತರಿಗೆ ಬುಧವಾರ ದೂರು ನೀಡಲಾಗಿದೆ.
ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಿಯಾ, ಸೌಕತ್, ತಮೀಮ್, ಮಣಿಕಂಠನ್, ಮನು ಮಾತ್ಯೂಸ್, ಖಾದರ್ ಮತ್ತಿತ್ತರು ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ಆಗ್ರಹ : “ವೆಸ್ಟರ್ನ್ ವಿದ್ಯಾಸಂಸ್ಥೆಯಲ್ಲಿ ನಡೆದ ವಂಚನೆಯನ್ನು ಕ್ಯಾಂಪಸ್ ಫ್ರಂಟ್ ಖಂಡಿಸುತ್ತಿದೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು 45000 ಶುಲ್ಕವನ್ನು ಕಟ್ಟಿ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಕಾಲೇಜಿಗೆ ಸೇರಿರುತ್ತಾರೆ ಎಲ್ಲರು ಬಡ ವರ್ಗದಿಂದ ಬಂದಿರುವ ವಿದ್ಯಾರ್ಥಿಗಲಾಗಿದ್ದು ಅಸಹಾಯಕರಾಗಿದ್ದಾರೆ. ಈ ಒಂದು ಘಟನೆಯು ಶಿಕ್ಷಣ ಕ್ಷೇತ್ರದೊಳಗಿನ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತಿದೆ. ವಾರದೊಳಗೆ ವಿದ್ಯಾರ್ಥಿಗಳ ಬೇಡಿಕೆಯ್ನನು ಸಂಸ್ಥೆಯು ಈಡೇರಿಸದೇ ಹೋದಲ್ಲಿ ಕ್ಯಾಂಪಸ್ ಫ್ರಂಟ್ ವತಿಯಿಂದ ಕಾಲೇಜಿನ ಮುಂಭಾಗದಲ್ಲಿ ಧರಣಿ ಮಾಡಲಾಗುವುದು” ಎಂದು ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

 

To Top
error: Content is protected !!
WhatsApp chat Join our WhatsApp group