ವಿದೇಶ ಸುದ್ದಿ

ಅನಿವಾಸೀ ಕನ್ನಡಿಗರ ಫೋರಂನ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ರವರಿಂದ ಸೌದಿ ಕನ್ನಡಿಗರ ಸುಧಾರಣೆಗೆ ಅಗತ್ಯ ಕ್ರಮದ ಭರವಸೆ

ವರದಿಗಾರ (ಫೆ 28) : ಕರ್ನಾಟಕ ಸರಕಾರವು ಹಲವಾರು ಯೋಜನೆಗಳನ್ನು ಗಲ್ಫ್ ಕನ್ನಡಿಗರಿಗಾಗಿ ಹಮ್ಮಿಕೊಂಡಿದ್ದು,ಅನಿವಾಸೀ ಕನ್ನಡಿಗರಿಗಾಗಿ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮವು ಅದರಲ್ಲಿ ಪ್ರಾಮುಖ್ಯವಾದುದು ಎಂದು ಕರ್ನಟಕ ಸರಕಾರದ ಅನಿವಾಸೀ ಕನ್ನಡಿಗರ ಫೋರಂನ ಉಪಾಧ್ಯಕ್ಷೆಯಾಗಿರುವ ಡಾ.ಆರತಿ ಕೃಷ್ಣ ರವರು, ಕೆ. ಎನ್.ಆರ್.ಐ.ಫೋರಂ ಪೂರ್ವ ವಲಯವು ಏರ್ಪಡಿಸಿದ್ದ ಅದ್ದೂರಿ ಸನ್ಮಾನವನ್ನು ಸ್ವೀಕರಿಸುತ್ತಾ ತಿಳಿಸಿದರು.
ಸರಕಾರವು ಇದೀಗಾಗಲೇ ಅನಿವಾಸೀ ಕನ್ನಡಿಗರ ಶ್ರೇಯೋಭಿವೃದ್ದಿ ಕಾರ್ಯಗಳಿಗಾಗಿ ಪ್ರಸಕ್ತ ಬಜೆಟ್ ನಲ್ಲಿ ಮೊತ್ತವನ್ನು ಮೀಸಲಿಟ್ಟಿದ್ದು, ಮಾತ್ರವಲ್ಲದೆ ಇದೀಗಾಗಲೇ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಲ್ಯಾಣ ಕೇಂದ್ರಗಳನ್ನು ತೆರೆದಿದ್ದು, ಸೌದಿ ಉದ್ಯೋಗ ಬಿಕ್ಕಟ್ಟಿನಿಂದ ಹಿಂತಿರುಗುವವರಿಗೆ ಬೇಕಾದ ಅಗತ್ಯ ಕ್ರಮಳನ್ನು ಕೈಗೊಳ್ಳಲಿದೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.


ಪೂರ್ವ ವಲಯ ಅನಿವಾಸೀ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿರುವ ಝಕರಿಯಾ ಮುಝೈನ್ ರವರು ಮಾತನಾಡುತ್ತಾ, ಡಾ. ಆರತಿ ಕೃಷ್ಣರವರ ಸೌದಿ ಬೇಟಿಯನ್ನು ಶ್ಲಾಘಿಸಿದರಲ್ಲದೆ, ಪ್ರಸಕ್ತ ಉದ್ಯೊಗ ಸಮಸ್ಯೆಗೆ ಆಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಡ ತರಲು ಸೌದಿಯಲ್ಲಿರುವ ಅನಿವಾಸೀ ಕನ್ಮಡಿಗರೆಲ್ಲ ಒಂದೇ ಸೂರಿನಡಿಯಲ್ಲಿ ಒಟ್ಟುಗೂಡುವುದು ಬಹಳ ಅನಿವಾರ್ಯ ಎಂದು ಅಬಿಪ್ರಾಯ ಪಟ್ಟರು
ಸೌದಿಯಲ್ಲಿನ ಪ್ರಸಕ್ತ ಉದ್ಯೋಗ ಬಿಕ್ಕಟ್ಟಿನ ಬಗ್ಗೆ ನೇರವಾಗಿ ತಿಳಿಯಲು ಸರಕಾರದ ಪ್ರತಿನಿಧಿಯಾಗಿ, ಡಾ. ಆರತಿ ಕೃಷ್ಣರವರ ಅಧಿಕೃತ ಬೇಟಿಯು ಅನಿವಾಸೀ ಕನ್ನಡಿಗರ ಮಟ್ಟಿಗೆ ಬಹಳ ಕುತೂಹಲ ಮೂಡಿಸಿತ್ತು. ಅಲ್ ಖೋಬಾರ್ ನ ಪ್ರತಿಷ್ಟಿತ ಹೋಟೆಲ್ ಹೋಲಿಡೇ ಇನ್ ನಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಸಾಮುದಾಯಿಕ ನಾಯಕರು, ಉದ್ಯಮಿಗಳು ಹಾಗೂ ಅನಿವಾಸೀ ಕನ್ನಡಿಗ ಸಂಘಟನಾ ಪ್ರತಿನಿಧಿಗಳು ಭಾಗವಹಿಸಿ, ಸರಕಾರದ ಅಧೀನದಲ್ಲಿರುವ ಅನಿವಾಸೀ ಕನ್ನಡಿಗರ ಫೋರಂನ ಯೋಜನೆಗಳನ್ನು ಸ್ವಾಗತಿಸಿದರು.

ಪ್ರಸಕ್ತ ಬಿಕ್ಕಟ್ಟಿನಿಂದ ತವರಿಗೆ ಮರಳಿರುವ ಹಾಗೂ ಸೌದಿಯಲ್ಲಿ ಉಳಿದಿರುವ ಅನಿವಾಸೀ ಕನ್ನಡಿಗರು ಸುಧಾರಿಸಲು ಬೇಕಾದ ಮೂಲಭೂತ ಕ್ರಮಗಳು ಹಾಗೂ ಕರಡು ನೀತಿಯನ್ನು ರಚಿಸಲು ಅನಿವಾಸಿಗಳೆಲ್ಲರಿಂದ ಮಾಹಿತಿ ಪಡೆದು ಕ್ರೋಢೀಕರಿಸಿದ ನಿವೇದನೆಯನ್ನು, ಪೂರ್ವ ವಲಯ ಅನಿವಾಸೀ ಕನ್ನಡಿಗರ ಫೋರಂನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರಕಾರಕ್ಕೆ ಸಲ್ಲಿಸಿದರು. ತದನಂತರ ಆಯ್ದ ಜಿಲ್ಲಾ ಮಟ್ಟದ ಸಂಘಟನಾ ಪ್ರತಿನಿಧಿಗಳು ತಮ್ಮ ಸೇವಾ ಚಟುವಟಿಕೆಗಳನ್ನು ಹಾಗೂ ತವರಿಗೆ ನೀಡುವ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಆತಿಥ್ಯವನ್ನು ಸ್ವೀಕರಿಸಿ ಸೌದಿ ಅರೇಬಿಯಾಕ್ಕೆ ಬಂದಿರುವ ಡಾ. ಆರತಿ ಕೃಷ್ಣರವರನ್ನು ಬಹಳ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಶ್ರೀಮತಿ ಜೋಯ್ ಫೆರ್ನಾಂಡಿಸ್, ಶ್ರೀಮತಿ ಮಾದವ ಅಮೀನ್ ಹಾಗೂ ವಿಮೆನ್ ಫ್ರಾಟರ್ನಿಟಿ ಫಾರಂ ನ ಸದಸ್ಯೆಯರು ಸನ್ಮಾನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಸೌದಿಯ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳಾದ ಶ್ರೀ ಅಬ್ದುಲ್ ಲತೀಫ್ ಸಾಲೆ ಅಲ್ ನಈಮಿ, ಅಬ್ದುಲ್ ಖಾಲಿಕ್ ಅಲ್ ಖಾಸಿಮಿ, ಸಾದಿಕ್ ಅಬ್ದುಲ್ಲಾ ಅಲ್ ಅಬಾಸಿ, ಪೂರ್ವ ವಲಯ ಅನಿವಾಸೀ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿರುವ ಝಕರಿಯಾ ಮುಝೈನ್, ಉಪಾಧ್ಯಕ್ಷರಾದ ಮಾಧವ್ ಅಮೀನ್ ಹಾಗೂ ಜೋಯ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್, ಖಜಾಂಚಿ ಶೇಖ್ ಎಕ್ಸಪರ್ಟೈಸ್, ಕಾರ್ಯದರ್ಶಿಗಳಾದ ಖಮಾರುದ್ದೀನ್ ಹಾಗೂ ಸಲಾಹದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಝಕರಿಯಾರವರು ಮೊದಲಿಗೆ ಸ್ವಾಗತಿಸಿ, ಸೌದಿ ಅರೇಬಿಯಾದಲ್ಲಿನ ಅನಿವಾಸೀ ಕನ್ನಡಿಗರ ಬಗ್ಗೆ ಸಂಕ್ಷಿಪ್ತ ನಿರೂಪಣೆಯನ್ನು ಒಕ್ಕೂಟದ ಸದಸ್ಯರಾದ ಮುಹಮ್ಮದ್ ಫಿರೋಝ್ ರವರು ಪ್ರಾಸ್ತಾವಿಕವಾಗಿ ನೀಡಿದರೆ, ಅನಿವಾಸೀ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಶರೀಫ್ ರವರು ಕೊನೆಯಲ್ಲಿ ಧನ್ಯವಾದಗೈದರು. ಒಕ್ಕೂಟದ ಸದಸ್ಯರಾದ ಎ.ಎಮ್ ಆರಿಫ್ ಜೋಕಟ್ಟೆ ಹಾಗೂ ಮುಹಮ್ಮದ್ ಇಕ್ಬಾಲ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು

ಈ ಸಮಾರಂಭದ ಪ್ರಾಯೋಜಕತ್ವವನ್ನು ಎಕ್ಸ್ಪರ್ಟೈಸ್, ರಿಯಲ್ ಟೆಕ್, ಅಲ್- ಮುಝೈನ್, ಸಾದ್ ಅಲ್ ಗಹತಾನಿ , ಅಲ್-ಮನಾಫಾ ಟ್ರಾನ್ಸ್ಪೋರ್ಟ್ ಹಾಗೂ ಮಾಧವ್ ಅಮೀನ್ ವಹಿಸಿದ್ದರು. ಮಲೆನಾಡ ಇಂದಿರಾ ಎಂದು ಬಿರುದಾಂಕಿತರಾಗಿರುವ ಡಾ. ಆರತಿ ಕೃಷ್ಣರವರು ಸಮಾಜ ಸೇವಕಿಯೂ ಆಗಿದ್ದು, ಸಮಾರಂಭದ ಮೊದಲಿಗೆ ಅತಿ ಹೆಚ್ಚು ಕನ್ನಡಿಗರು ಕೆಲಸ ಮಾಡುವ ಕಂಪೆನಿಗಳಲ್ಲೊಂದಾದ ಜುಬೈಲ್ ನ ಎಕ್ಸಪರ್ಟೈಸ್ ಸಂಸ್ಥೆ ಗೆ ಬೇಟಿ ಕೊಟ್ಟು ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದರು.

ಕಾರ್ಯಕ್ರಮದ ಒಂದು ಫೋಟೋ ಝಲಕ್


To Top
error: Content is protected !!
WhatsApp chat Join our WhatsApp group