ಅನಿವಾಸಿ ಕನ್ನಡಿಗರ ವಿಶೇಷ

ದಮ್ಮಾಮ್: ನಾಳೆ ಆರತಿ ಕೃಷ್ಣರವರಿಂದ ಅನಿವಾಸಿಗರ ಭೇಟಿ ಹಾಗೂ ಸನ್ಮಾನ ಕಾರ್ಯಕ್ರಮ

ದಮ್ಮಾಮ್, ಸೌದಿ ಅರೇಬಿಯಾ: ಕರ್ನಾಟಕ ಸರಕಾರದ ಅಧೀನದಲ್ಲಿರುವ ಕರ್ನಾಟಕ ಅನಿವಾಸೀ ಫೋರಂ (KNRI Forum) ನ Deputy Chairman ಆಗಿರುವ ಶ್ರೀಮತಿ ಆರತಿ ಕೃಷ್ಣರವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದು, ಫೆಬ್ರುವರಿ 24ರಂದು ಶನಿವಾರ (ನಾಳೆ) ದಮ್ಮಾಮ್ ಗೆ ಬೇಟಿ ನೀಡಲಿದ್ದಾರೆ ಹಾಗೂ ಅಂದು ಸಂಜೆ 6 ಗಂಟೆಗೆ ಸರಿಯಾಗಿ ಅಲ್ ಖೋಬಾರ್ ನ ಹೊಲಿಡೇ ಇನ್ನ್ ಹೋಟೆಲಿನಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮವಿದ್ದು, ತದ ನಂತರ ಪ್ರಸಕ್ತ ಸನ್ನಿವೇಶದ ಬಗ್ಗೆ ಚರ್ಚಿಸಿ, ಅನಿವಾಸೀ ಕನ್ನಡಿಗರಿಗೋಸ್ಕರ ಕರ್ನಾಟಕ ಸರಕಾರವು ಜಾರಿಗೊಳಿಸಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕರ್ನಾಟಕ ಅನಿವಾಸೀ ಫೋರಂ ಪೂರ್ವ ವಲಯ ದ ಅಧ್ಯಕ್ಷರಾದ ಝಕರಿಯಾ ಮುಝೈನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯಮಿಗಳಿಗೆ ಅವರ ಉದ್ಯಮವನ್ನು, ಯಾವರೀತಿ ನಮ್ಮ ರಾಜ್ಯದ ಜನತೆಗೆ ಉಪಕರಿಸುವ ರೀತಿಯಲ್ಲಿ ತಮ್ಮ ಜನುಮ ಭೂಮಿಯಲ್ಲಿ ವಿಸ್ತರಿಸಬಹದು ಎಂಬುದರ ಬಗ್ಗೆ ಆಲೋಚಿಸುವ, ಅದೇ ರೀತಿ ಇಲ್ಲಿ ಇದೀಗ ಸೌದಿಯ ಪ್ರಸಕ್ತ ಸನ್ನಿವೇಶದಲ್ಲಿ ಬಹಳ ಸಂಕಷ್ಟಕ್ಕೀಡಾಗಿರುವ ದುಡಿಯುವ ವರ್ಗಕ್ಕೂ ಬೇಕಾಗಿರುವ ಪರ್ಯಾಯ ವ್ಯವಸ್ಥೆಯನ್ನು ನೇರವಾಗಿ ಚರ್ಚಿಸುವ ಮತ್ತು ಸರಕಾರದ ಗಮನಕ್ಕೆ ತರುವ ಒಂದು ಸದವಕಾಶ ಕೂಡ ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು

ಈ ಸಮಾರಂಭಕ್ಕೆ ರಾಜ್ಯ, ಜಿಲ್ಲಾ ಮಟ್ಟದ ಹಾಗೂ ಮೊಹಲ್ಲಾ ಮಟ್ಟದ ಎಲ್ಲ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ , ಸಾಮಾಜಿಕ ಕಾರ್ಯಕರ್ತರಿಗೆ , ಬುದ್ದಿಜೀವಿಗಳಿಗೆ ಹಾಗೂ ಉದ್ಯಮಿಗಳಿಗೆ ಆಮಂತ್ರಣ ನೀಡಿದ್ದು ಎಲ್ಲರ ಸಹಕಾರ ನಿರೀಕ್ಷಿಸಲಾಗಿದೆ. ಎಂದು ಝಕರಿಯಾ ಮುಝೈನ್ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಶ್ರೀಮತಿ ಆರತಿ ಕೃಷ್ಣರವರು ದಮ್ಮಾಮ್ ನಲ್ಲಿ ಮಾತ್ರವಲ್ಲದೆ, ರಿಯಾದ್ ಹಾಗೂ ಜಿದ್ದಾದಲ್ಲೂ ಅನಿವಾಸಿಗಳನ್ನು ಬೇಟಿಯಾಗುವ ಕಾರ್ಯಕ್ರಮ ವಿದೆ ಎಂದು ಪ್ರಕಟಣೆ ತಿಳಿಸಿದೆ.

To Top
error: Content is protected !!
WhatsApp chat Join our WhatsApp group