ಜಿಲ್ಲಾ ಸುದ್ದಿ

ಶಾಸಕರೇ ನಿಮ್ಮನ್ನು ಆಯ್ಕೆ ಮಾಡಿದ್ದು ಸೀರೆ ಹಂಚೋಕೆ ಅಲ್ಲ… ಕ್ಷೇತ್ರ ಸುಧಾರಣೆ ಮಾಡಲು : ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮತದಾರರು

ವರದಿಗಾರಚಿಕ್ಕಬಳ್ಳಾಪುರ (22-02-2018) : ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ಕಾಳಜಿ ಹೆಚ್ಚಾಗುತ್ತೆ. ಮತದಾರರಿಗೆ ಸೀರೆ , ಹಣ, ಹೆಂಡ ಹಂಚುವುದು ಶುರುವಾಗಿದೆ. ಚಿಕ್ಕಬಳ್ಳಾಪುರದ ಶಾಸಕರಾದ ಡಾ. ಸುಧಾಕರ್ ಅವರ ಕಡೆಯಿಂದ ಸೀರೆ ಹಂಚುತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ. ನಾವು ಮತ ನೀಡಿ ಶಾಸಕರನ್ನಾಗಿ ಮಾಡಿದ್ದು ಕ್ಷೇತ್ರದ ಅಭಿವೃದ್ಧಿ ಮಾಡಲಿಕ್ಕೆ ಹೊರತು ಸೀರೆ ಹಂಚಲಿಕ್ಕೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಶಾಸಕರು ನೀಡಿದ್ದ ಸೀರೆಗಳನ್ನು ರಸ್ತೆಯಲ್ಲಿ ಸುಡುವ ಮೂಲಕ ಪ್ರತಿಭಟಿಸಿದ್ದಾರೆ. ಸೀರೆಗೆ ಬೆಂಕಿಹಾಕಿ ಶಾಸಕ ಡಾ. ಸುಧಾಕರ್ ಅವರಿಗೆ ಪ್ರಶ್ನೆ ಮಾಡಿರುವ ವಿಡೀಯೋ ಈಗ ವೈರಲ್ ಆಗಿದೆ.

ಶಾಸಕರು ಮಾಡಬೇಕಾಗಿದ್ದು ಕ್ಷೇತ್ರದ ಸುಧಾರಣೆಯೇ ಹೊರತು ಸೀರೆ, ಕುಕ್ಕರ್ ವಿತರಿಸುವುದಲ್ಲ. ನಮ್ಮ ಹೆಣ್ಣು ಮಕ್ಕಳಿಗೆ ಸೀರೆ ಕೊಡಿಸುವ ಶಕ್ತಿ ನಮಗಿದೆ. ದಯವಿಟ್ಟು ಶಾಸಕರು ಕ್ಷೇತ್ರದ ಸುಧಾರಣೆ ಕಡೆಗೆ ಗಮನ ಕೊಡಬೇಕು. ಇಷ್ಟು ದಿನ ಇಲ್ಲದ ಈ ಕಾಳಜಿ ಚುನಾವಣೆ ಹತ್ತಿರ ಬಂದಗ ಯಾಕೆ ಎಂದು ಮತದಾರು ಆಕ್ರೋಶ ವ್ಯಕ್ತಪಡಿಸಿದರು.

ವರದಿ : ಪ್ರಶಾಂತ್ ಚಿಕ್ಕಬಳ್ಳಾಪುರ

To Top
error: Content is protected !!
WhatsApp chat Join our WhatsApp group