ಮಾಹಿತಿ

ಇಲ್ಲ, ನಿಮ್ಮ ಮೊಬೈಲ್ ನಂಬರ್ 13 ಡಿಜಿಟ್ ಆಗುವುದಿಲ್ಲ!!

ಮಾಧ್ಯಮಗಳಲ್ಲಿ ಬಂದ ಅರ್ಧಂಬರ್ಧ ವರದಿಗಳನ್ನು ಓದಿ ಭಯಪಡಬೇಡಿ!

ವರದಿಗಾರ(21-02-2018): ‘ಇನ್ನು ಮುಂದೆ 10 ಡಿಜಿಟ್ ಮೊಬೈಲ್ ನಂಬರ್ ನಡೆಯೋದಿಲ್ಲ’ , ‘ ನಿಮ್ಮ ಮೊಬೈಲ್ ನಂಬರ್ 13 ಡಿಜಿಟ್ ಗಳಾಗಿ ಬದಲಾಗಲಿವೆ’ ಎಂಬಿತ್ಯಾದಿ ವರದಿಗಳನ್ನು ಓದಿ ಈಗಾಗಲೇ ಕೆಲವರು “10 ಡಿಜಿಟ್ ನಂಬರ್ ನೆನಪಿಡಲು ಕಷ್ಟಪಡುತ್ತಿರುವಾಗಲೇ, ಇದೇನಪ್ಪಾ 13 ಡಿಜಿಟ್ ನಂಬರ್” ಎಂದು ಗೊಣಗಾಡುತ್ತಿದ್ದಾರೆ. ಇಲ್ಲ, ಭಯಪಡಬೇಡಿ. ನಿಮ್ಮ ಮೊಬೈಲ್ ನಂಬರ್ ಬದಲಾಗುವುದಿಲ್ಲ. ಕೆಲವು ಮಾಧ್ಯಮಗಳು DoT(Department of Telecommunications) ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿದ್ದೇ ಈ ಆವಾಂತರಕ್ಕೆ ಕಾರಣ.

DoT ಹೊರಡಿಸಿದ ಸುತ್ತೋಲೆ M2M (machine to machine, ಮಶಿನ್ ಟು ಮಶಿನ್) ಸಿಮ್ ಕಾರ್ಡ್’ಗಳಿಗಾಗಿದ್ದು, ನಮ್ಮ ಮೊಬೈಲ್ ಫೋನ್ ಗಳಲ್ಲಿ ಉಪಯೋಗಿಸುವ ಸಿಮ್ ಕಾರ್ಡ್’ಗಳಿಗಲ್ಲ.

ಮಶಿನ್ ಟು ಮಶಿನ್ ಸಿಮ್ ಕಾರ್ಡ್’ಗಳನ್ನು ಅಂಗಡಿಗಳಲ್ಲಿರುವ ಕಾರ್ಡ್ ಸ್ವೈಪ್ ಮಶಿನ್, ಕಾರುಗಳನ್ನು ಟ್ರಾಕ್ ಮಾಡಲು ಕಾರುಗಳಲ್ಲಿ, ಟ್ರಾಫಿಕ್ ಮ್ಯಾನೇಜ್’ಮೆಂಟ್ ಸಿಸ್ಟಮ್’ಗಳಲ್ಲಿ ಉಪಯೋಗಿಸಲಾಗುತ್ತಿದೆ.

ಯಂತ್ರಗಳಲ್ಲಿ ಉಪಯೋಗಿಸಲಾಗುವ ಈ ಸಿಮ್ ಕಾರ್ಡ್’ಗಳ ನಂಬರ್ ಗಳನ್ನು 13 ಡಿಜಿಟ್ ಗೆ ಬದಲಾಯಿಸಲು DoT ಈ ತಿಂಗಳ ಪ್ರಾರಂಭದಲ್ಲಿ ಸುತ್ತೋಲೆಯನ್ನು ಹೊರಡಿಸಿತ್ತು. ಸುತ್ತೋಲೆಯ ಪ್ರಕಾರ ಈಗ ಅಸ್ಥಿತ್ವದಲ್ಲಿರುವ ಎಲ್ಲಾ 10 ಡಿಜಿಟ್ ಗಳ M2M ನಂಬರ್ ಗಳನ್ನು ಅಕ್ಟೋಬರ್ 1ರಿಂದ ಪ್ರಾರಂಭಿಸಿ ಡಿಸೆಂಬರ್ 31 ರ ಒಳಗೆ 13 ಡಿಜಿಟ್ಗಳಿಗೆ ಮಾರ್ಪಡಿಸಬೆಕಾಗಿದೆ. ಜುಲೈ 1ರಿಂದ ಎಲ್ಲಾ ಹೊಸ M2M ನಂಬರ್ ಗಳು 13 ಡಿಜಿಟ್ ಗಳಲ್ಲಿ ಲಭ್ಯವಿರುವುದು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group