ಸುತ್ತ-ಮುತ್ತ

ಬೆಂಗ್ರೆ ಘಟನೆ ಮುಸ್ಲಿಮರ ಮತ್ತು ಮೊಗವೀರರ ನಡುವೆ ಅನ್ಯೋನ್ಯತೆ ಮುರಿಯುವ ಫ್ಯಾಸಿಸ್ಟ್ ಪ್ರಯತ್ನ: ಎಸ್ ಡಿ ಪಿ ಐ

ವರದಿಗಾರ (ಫೆ 21) : ನಿನ್ನೆ ಉಡುಪಿಯಲ್ಲಿ ಅಮಿತ್ ಶಾ ಭಾಗವಹಿಸಿದ ಬಿಜೆಪಿ ಪ್ರೇರಿತ ಮೊಗವೀರ ಸಮಾವೇಶದಲ್ಲಿ ಭಾಗವಹಿಸಿ ಹಿಂತಿರುಗಿ ಬರುತ್ತಿದ್ದ 4 ಬಸ್ಸುಗಳು ಬೆಂಗ್ರೆ ಕಸಬ ಮೊಹಲ್ಲಾಗಳಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಬಸ್ಸಿನಲ್ಲಿದ್ದವರು ಬೊಬ್ಬೆ ಹಾಕಿಕೊಂಡು, ಪ್ರಚೋದಿತ ಘೋಷಣೆಗಳನ್ನು ಕೂಗಿಕೊಂಡು ಸಾಗುವ ಸಮಯದಲ್ಲಿ ನಡೆದ ಅಹಿತಕರ ಘಟನೆ ಮತ್ತು ನಂತರ ಮಂಗಳೂರು ಬಂದರಿನಿಂದ ತೋಟ ಬೆಂಗ್ರೆಯ ಮೂಲಕ ವಾಹನಕ್ಕೆ ಪೆಟ್ರೋಲ್ ತರುತ್ತಿದ್ದ ಅಮೀರ್ ಹುಸೇನ್ ನ ಮೇಲೆ ನಡೆದ ಹಲ್ಲೆ ಘಟನೆಯು ಮೊಗವೀರರ ಮತ್ತು ಮುಸಲ್ಮಾನರ ನಡುವಿನ ಅನ್ಯೋನ್ಯತೆ ಮುರಿಯುವ ಪ್ರಯತ್ನವೆಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

ಅಮಿತ್ ಶಾ ಭಾಷಣದಿಂದ ಪ್ರೇರಿತವಾದ ಗುಂಪು ಮುಂದಿನ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಗಲಭೆ ನಡೆಸಲು ಇಲ್ಲಿ ಪ್ರಯತ್ನಿಸಿದ್ದಾರೆ. ಪೊಲೀಸ್ ಇಲಾಖೆ ಇಂತಹ ಸ್ಥಳಕ್ಕೆ ಬಂದೋಬಸ್ತ್ ಸರಿಯಾಗಿ ವ್ಯವಸ್ಥೆ ಗೊಳಿಸಬೇಕಿತ್ತು.ಬೆಂಗ್ರೆ ಕಸಬ ಮತ್ತು ತೋಟ ಬೆಂಗ್ರೆಯಲ್ಲಿ ವಾಸಿಸುವ ಮೊಗವೀರರು ಮತ್ತು ಮುಸಲ್ಮಾನರು ಮೀನಿನ ವ್ಯಾಪರವನ್ನು ನಡೆಸುತ್ತಿದ್ದು ಪರಸ್ಪರ ಅನ್ಯೋನ್ಯತೆಯಿಂದ ಪ್ರೀತಿ ವಿಶ್ವಾಸದಿಂದ ಜೀವಿಸುತ್ತಿದ್ದಾರೆ. ಕಳೆದ 1992 ರ ಅಹಿತಕರ ಘಟನೆ ನಂತರ ಇದೇ ಮೊದಲ ಬಾರಿಗೆ ಮೊಗವೀರರು ಮತ್ತು ಮುಸಲ್ಮಾನರ ನಡುವೆ ಗಲಭೆಯ ಪ್ರಯತ್ನ ನಡೆದಿದ್ದು, ಫ್ಯಾಸಿಸ್ಟ್ ಶಕ್ತಿ – ಬಿಜೆಪಿಯ ಕೋಮುವಾದ ತಂತ್ರಕ್ಕೆ ಬಲಿಯಾಗದೆ ಮೊಗವೀರರು ಮುಸಲ್ಮಾನರು ಪರಸ್ಪರ ಐಕ್ಯತೆ ಅನ್ಯೋನ್ಯತೆ ಕಾಯ್ದು ಕೊಳ್ಳಬೇಕೆಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

To Top
error: Content is protected !!
WhatsApp chat Join our WhatsApp group