ಅನಿವಾಸಿ ಕನ್ನಡಿಗರ ವಿಶೇಷ

ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಭಾರತೀಯ ಡೇವಿಡ್ ಮೃತದೇಹವನ್ನು ತವರಿಗೆ ತಲುಪಿಸಿದ ಐ.ಎಸ್.ಎಫ್

ಸೌದಿ ಅರೆಬಿಯಾ ಅಭಾ ಅಸೀರ್ ಪ್ರಾಂತ್ಯದ ಅಲ್-ನಮಾಸ್ ಎಂಬಲ್ಲಿ ಸುಮಾರು 15 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಡೇವಿಡ್ ಜ಼ಂಬೆರಿ ಇದೇ ಜನವರಿ 28 ರಂದು ಊರಿಗೆ ಹೋಗುವ ಸಲುವಾಗಿ ಟಿಕೇಟ್ ಬುಕ್ ಮಾಡಿದ್ದರು. ಆದರೆ ಜನವರಿ 28 ರ ಮುಂಜಾನೆ ಅನಾರೋಗ್ಯದ ಕಾರಣ ಅಲ್-ನಮಾಸ್ ಜನರಲ್ ಹಾಸ್ಪಿಟಲ್ ಗೆ ಇವರನ್ನು ಸೇರಿಸಲಾಯಿತದಾರೂ ಹೃದಯ ಸ್ಥಂಭನದಿಂದ ಮೃತಪಟ್ಟರು.

ಡೇವಿಡ್ ಜ಼ಂಬೆರಿ ರವರ ಅಳಿಯ ಸೊಶಿಯಲ್ ಪಾರಂ ಕಮೀಸ್ ಮುಶೈತ್ ಘಟಕದ ಅಧ್ಯಕ್ಷರು ಮತ್ತು ಜಿದ್ದಾ ಕೌನ್ಸಲಿಟಿಯ ಸಿ.ಡಬ್ಲ್ಯು ಸದಸ್ಯರಾದ ಹನೀಫ್ ಮಂಜೇಶ್ವರ ಅವರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು. ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಕಾರ್ಯದರ್ಶಿ ಅಸಿರ್ ಕುಂಜದಕಟ್ಟೆ, ಇಬ್ರಾಹಿಂ ದೇರಳಕಟ್ಟೆ, ನೂರುದ್ದೀನ್ ಆವಿನಹಳ್ಳಿ, ಮನ್ಸೂರ್, ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರ ಭೇಟಿ ನೀಡಿ ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.

ಹೀಗೆ ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಸತತ ಪರಿಶ್ರಮದ ಫಲವಾಗಿ ಡೇವಿಡ್ ಜ಼ಂಬೆರಿ ರವರ ಮೃತದೇಹವನ್ನು ಅಂತಿಮವಾಗಿ ದಿನಾಂಕ 18-02-2018 ರಂದು ಅಭಾ ವಿಮಾನ ನಿಲ್ದಾಣದಿಂದ ಮುಂಬೈ ವಿಮಾನ ನಿಲ್ದಾಣದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಇಂಡಿಯನ್ ಸೋಶಿಯಲ್ ಪೋರಂ ಕಮೀಷ್ ಮುಶೈತ್ ಘಟಕದ ನೆರವಿನಿಂದ ಡೇವಿಡ್ ಜ಼ಂಬೆರಿ ಮೃತದೇಹವು ಸ್ವಗೃಹವನ್ನು ತಲುಪುವುದರೊಂದಿಗೆ ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಪತ್ನಿ ಹಾಗೂ ಸಂಬಂಧಿಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ವರದಿ: ನೂರುದ್ದೀನ್ ಆವಿನಹಳ್ಳಿ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group