ಸುತ್ತ-ಮುತ್ತ

ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ : ಡಾ. ಸಿ ಆರ್ ಮನೋಹರ್

ಬಾಗೇಪಲ್ಲಿ : ಮಕ್ಕಳಲ್ಲಿ ಆಗಾದವಾದ ಶಕ್ತಿ ಅಡಗಿದ್ದು ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಸಮಾಜ ಸೇವಕ ಡಾ|| ಸಿ.ಆರ್.ಮನೋಹರ್ ಹೇಳಿದರು.  ಅವರು ತಾಲ್ಲೂಕಿನ ಗೂಳೂರು ಗ್ರಾಮದ ನೇಹ ರೂರಲ್ ಡೆವಲಪ್ಮೆಂಟ್ ಎಜುಕೇಷನ್ ಟ್ರಸ್ಟ್ (ರಿ) ನೇಹ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಏರ್ಪಡಿಸಿದ್ದ ಐದನೇ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಸಂಭ್ರಮ ಮತ್ತು ಯುವ ಪತ್ರಕರ್ತ ರಿಂದ ಸುದ್ದಿ ಮಾದ್ಯಮ ಲೋಗೊ ಬಿಡುಗಡೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಬಾಲ್ಯದಲ್ಲೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಮಾಡಬೇಕು ಎಂದು ಹೇಳಿದ ಇವರು ಇಂದಿನ ಮಕ್ಕಳಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದರು.

ಮಕ್ಕಳಲ್ಲಿ ಭಗವಂತನಿರುತ್ತಾನೆ ಜಗತ್ತಿನ ಎಲ್ಲಾ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ ಶಿಕ್ಷಕರು-ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸಿ ಎಂದು ಕರೆ ನೀಡಿದರು.ಕಾರ್ಯಕ್ರಮ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಬ್ರಹ್ಮಾನಂದ ಸ್ಬಾಮೀಜಿ ರವರು
ಮನೆಯಲ್ಲಿ ಪಾಲಕರು ಟಿವಿಯಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳಿಗೆ ಎಲ್ಲವನ್ನು ಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ಇರದಿದ್ದಲ್ಲಿ ಮಕ್ಕಳು ವಿದ್ಯಾವಂತರಾಗುವುದಿಲ್ಲವೇಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಹಲವಾರು ನೃತ್ಯಗಳ ಮೂಲಕ ಜನರಿಗೆ ಉತ್ತಮ ಮನರಂಜನೆ ನೀಡಿದರು

ಈ ಕಾರ್ಯಕ್ರಮದಲ್ಲಿ ಸಚಿವರ ಸಂಯೋಜನ ವಿಶೇಷ ಅಧಿಕಾರಿ ವೆಂಕಟೇಶ್,ಮಾಜಿ ಪುರಸಭೆ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು,ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ವಿ.ಪೂಜಪ್ಪ,ತಾಲ್ಲೂಕು ಪಂಚಾಯತಿ ಸದಸ್ಯರಾದ ರಾಮಕೃಷ್ಣಾರೆಡ್ಡಿ,ಕಲ್ಲಿಪಲ್ಲಿ ವೆಂಕಟೇಶ್,ನಾಗರೀಕ ಪೆÇಲೀಸ್ ದೂರು ಪ್ರಾಧಿಕಾರ ಸದಸ್ಯ ಎ.ಜಿ.ಸುಧಾಕರ್,ಮಾದ್ಯಮ ವರದಿಗಾರರಾದ ಸುರೇಶ್,ಮಂಜುನಾಥ್,ದಯಾಸಾಗರ್,ಹರಿಬಾಬು, ಮುಖಂಡರಾದ ಜಿನ್ನಿ,ಗೂಳೂರು ಲಕ್ಷ್ಮೀನಾರಾಯಣ,ಗೂಳೂರು ಪಂಚಾಯತಿ ಅಧ್ಯಕ್ಷ ಮುನ್ನಖಾನ್,ಉದ್ಯಮಿ ಸುರೇಶ್ ರೆಡ್ಡಿ,ನೇಹ ವಿದ್ಯಾ ಸಂಸ್ಥೆ ಶಾಲೆಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ನಾಗರತ್ನಮ್ಮ,ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಶಾಲೆಯ ಸಿಬ್ಬಂದಿ ಶಿವ,ಭಾರತಿ,ಧನು,ವಾಣಿ ಮುಂತಾದವರು ಭಾಗವಹಿಸಿದ್ದರು

To Top
error: Content is protected !!
WhatsApp chat Join our WhatsApp group