ಸುತ್ತ-ಮುತ್ತ

‘ಇಸ್ಲಾಂ ಧರ್ಮವು ಶಾಂತಿ ಹಾಗೂ ಮಾನವೀಯತೆಯನ್ನು ಸಾರುವ ಧರ್ಮವಾಗಿದ್ದು, ರಕ್ತವನ್ನು ಚೆಲ್ಲದಿರಿ ರಕ್ತವನ್ನು ದಾನ ಮಾಡಿ ಎಂಬ ಉತ್ತಮ ಸಂದೇಶವನ್ನು ನೀಡಿದೆ: ಎಸ್.ಬಿ.ದಾರಿಮಿ

ವರದಿಗಾರ (ಫೆ.17): ‘ಇಸ್ಲಾಂ ಧರ್ಮವು ಶಾಂತಿ, ಮಾನವೀಯತೆಯನ್ನು ಸಾರುವ ಧರ್ಮವಾಗಿದ್ದು, ರಕ್ತವನ್ನು ಚೆಲ್ಲದಿರಿ ರಕ್ತವನ್ನು ದಾನ ಮಾಡಿ ಎಂಬ ಉತ್ತಮ ಸಂದೇಶವನ್ನು ನೀಡಿದೆ’ ಎಂದು ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದ್ದಾರೆ.

ಅವರು ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ಕ್ಲಸ್ಟರ್,ಉಬಾರ್ ಡೋನರ್ಸ್, ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಅಶ್ರಯದಲ್ಲಿ ಯೆನಪೋಯ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಉಪ್ಪಿನಂಗಡಿ ಪೃಥ್ವಿ ಶಾಪಿಂಗ್ ಮಾಲ್’ನಲ್ಲಿ ನಡೆದ ‘ರಕ್ತದಾನ ಶಿಬಿರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾಲಿಕುದ್ದೀನಾರ್ ಜುಮ್ಮಾ ಮಸ್ಜಿದ್ ಉಪ್ಪಿನಂಗಡಿ ಇದರ ಖತೀಬ್ ಅಬ್ದುಲ್ ಸಲಾಂ ಪೈಝಿ ಎಡಪ್ಪಾಲ್ ದುಃಆ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಲಿಕುದ್ದೀನಾರ್ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷೀಯ ಭಾಷಣ ಮಾಡಿ ಯುವಕರ ಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದರು.

ಮುಖ್ಯ ಅತಿಥಿ ಉಪ್ಪಿನಂಗಡಿಯ ವೈದ್ಯರಾದ ಡಾ. ಶೆಣೈ, ರಕ್ತದಾನದ ಕುರಿತು ಅಗತ್ಯ ಮಾಹಿತಿಗಳನ್ನು ಸಭಿಕರಿಗೆ ನೀಡಿದರು.ಈ ಶಿಬಿರದಲ್ಲಿ ಹೆಚ್ಚಿನ ರಕ್ತದಾನಿಗಳು ತಮ್ಮ ಅಮೂಲ್ಯ ರಕ್ತದಾನವನ್ನು ಮಾಡಿ ಸಹಕರಿಸಿದರು.

ಈ ಕಾರ್ಯಕ್ರಮದ ರೂವಾರಿ ಉಬಾರ್ ಡೋನರ್ಸ್ ಅಧ್ಯಕ್ಷರಾದ ಉದ್ಯಮಿ ಶಬೀರ್ ಕೆಂಪಿಗೆ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಶಾಲು ಹೊದಿಸಿ,ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಐ ಅಶ್ರಫ್ ಮೈಸೂರು, ಹಾಜಿ ಉಮರ್ ಯು.ಎಸ್.ಎಫ್, ಅಶ್ರಫ್ ಹಾಜಿ ಪೆದಮಲೆ, ಹಾರೂನ್ ಹಾಜಿ ಅಗ್ನಾಡಿ, ಅಬ್ದುಶುಕೂರು ಹಾಜಿ ಶುಕ್ರಿಯಾ, ಸಿದ್ದೀಕ್ ಮಂಜೇಶ್ವರ, ಮುಸ್ತಫಾ44, ಹನೀಫ್ ಕಡವಿನಬಾಗಿಲು, ಮುಹಮ್ಮದ್ ಕೂಟೇಲು, ಅಶ್ರಫ್ ಕೊಳ್ಳೇಜಾಲು, ಅಶ್ರಫ್ ಹನೀಫಿ, ರವೂಫ್ ಹಾಜಿ, ಯೂಸುಫ್ ಹಾಜಿ, ಅಬ್ದುರ್ರಹ್ಮಾನ್ ಮಠ, ಯುಟಿ ತೌಸೀಫ್, ಫಯಾಝ್ ಯುಟಿ, ಅಬ್ದುಲ್ ಲತೀಫ್ ಎಚ್.ಎಸ್.ಎ, ಅಶ್ರಫ್ ಮಂಗಳೂರು, ಶಂಸುದ್ದೀನ್ ಪಿಲಿಗೂಡು,ರಿಯಾಝ್ ಇಂಡಿಯನ್,ಅಬ್ದುರ್ರಹ್ಮಾನ್ ಹಾಜಿ, ನಝೀರ್ ಮಠ, ಮೋನಿಚ್ಚ ಕಡವಿನಬಾಗಿಲು, ಎಚ್.ಯೂಸುಫ್ ಹಾಜಿ,ಇಸ್ಮಾಯಿಲ್ ತಂಙಲ್, ಲತೀಫ್ ನ್ಯಾಷನಲ್, ಯೂಸುಫ್ ಕಡವಿನಬಾಗಿಲು,ಇಬ್ರಾಹಿಂ ದಾರಿಮಿ, ಸಿದ್ದೀಕ್ ಫೈಝಿ ಕುದ್ಲೂರು,ಬಶಿರ್ ಮಠ,ಹನೀಫ್ ಕೋನಾಡಿ,ಜಬ್ಬಾರ್ ನಿನ್ನಿಕಲ್,ಮುಸ್ತಾಕ್ ಕುದ್ಲೂರು,ಝಕರಿಯಾ ಅಗ್ನಾಡಿ, ಉಬಾರ್ ಡೋನರ್ಸ್ ಅಡ್ಮಿನ್ ಶಮೀರ್ ಕಡವಿನಬಾಗಿಲು ಉಪಸ್ಥಿತರಿದ್ದರು.

ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ಕ್ಲಸ್ಟರ್ ಕಾರ್ಯದರ್ಶಿ ಮುಹಿನುದ್ದೀನ್ ಹುದವಿ ಸ್ವಾಗಿತಿ, ಅಬೂಬಕ್ಕರ್ ಸಿದ್ದೀಕ್ ದಾರಿಮಿ)ಅಧ್ಯಕ್ಷರು ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ಕ್ಲಸ್ಟರ್) ವಂದಿಸಿದರು.

To Top
error: Content is protected !!
WhatsApp chat Join our WhatsApp group