ಜಿಲ್ಲಾ ಸುದ್ದಿ

‘ಪಾಪ್ಯುಲರ್ ಫ್ರಂಟ್ ಡೇ’ ಪ್ರಯುಕ್ತ ಸುಳ್ಯದಲ್ಲಿ ಯೂನಿಟಿ ಮಾರ್ಚ್ ಮತ್ತು ಸಮಾವೇಶ

ವರದಿಗಾರ (ಫೆ 16) : ಸಾಮಾಜಿಕ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೀಗ ತನ್ನ 11ನೇ ವರ್ಷಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಅಲ್ಪಸಂಖ್ಯಾತ, ದಲಿತ, ರೈತ, ಹಿಂದುಳಿದ ವರ್ಗಗಳು ನಿರಂತರವಾಗಿ ಶೋಷಣೆಗೊಳಗಾಗಿ, ಹಕ್ಕುಗಳಿಂದ ವಂಚಿತರಾದ ವೇಳೆ, 80ರ ದಶಕದ ಕೊನೆಯ ಮತ್ತು 90ರ ದಶಕದ ಆದಿಯಲ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಸಂಘಟನೆಯು 2007ರ ವೇಳೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಚಳುವಳಿಯ ರೂಪದಲ್ಲಿ ಹೊರಹೊಮ್ಮಿತು.
ವಿವಿಧ ಸರಕಾರಗಳು ಮುಸ್ಲಿಮ್ ಸಮುದಾಯದ ಹಿಂದುಳಿವಿಕೆಯ ಬಗ್ಗೆ ಹಲವಾರು ಆಯೋಗಗಳನ್ನು ರಚಿಸಿ ಮುಸ್ಲಿಮರು ಶೈಕ್ಷಣಿಕ, ಔದ್ಯೋಗಿಕ ಮತ್ತು ಅಧಿಕಾರ ಕ್ಷೇತ್ರಗಳಿಂದ ವಂಚಿತರಾಗಿದ್ದಾರೆ ಎಂಬುವುದನ್ನು ಖಚಿತಪಡಿಸಿದೆ. ಈ ವೇಳೆ ನಾಗರಿಕರ ಮಧ್ಯೆ ಸಾಮಾಜಿಕ ನ್ಯಾಯದ ಪ್ರಜ್ಞೆಯನ್ನು ಮೂಡಿಸಿ ಸಮಗ್ರ ಸಬಲೀಕರಣದ ಅಜೆಂಡಾದೊಂದಿಗೆ ಪಾಪ್ಯುಲರ್ ಫ್ರಂಟ್ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯು ತನ್ನ 11ನೇ ವರ್ಷಾಚರಣೆಯ ಸಂದರ್ಭವಾದ ಫೆಬ್ರವರಿ 17ರಂದು ದ.ಕ ಜಿಲ್ಲೆಯ ಸುಳ್ಯದಲ್ಲಿ ಮಧ್ಯಾಹ್ನ 2:30 ಗಂಟೆಗೆ ಯೂನಿಟಿ ಮಾರ್ಚ್ ಮತ್ತು ಸಂಜೆ 3:30ಕ್ಕೆ ಸರಿಯಾಗಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯ ಅದ್ಯಕ್ಷತೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ರವರು ವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಕೆ.ಎಮ್ ಶರೀಫ್ ರಾಷ್ಟ್ರೀಯ ಸಮಿತಿ ಸದಸ್ಯರು ಪಾಪ್ಯುಲರ್ ಫ್ರಂಟ್ , ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಅಬ್ದುಲ್ ಮಜೀದ್ ಕೊಡ್ಲಿಪೇಟೆ ಉಪಾಧ್ಯಕ್ಷರು ಎಸ್ ಡಿ ಪಿ ಐ , ಶಫೀಕ್ ಖಾಸಿಮಿ ಕೇರಳ,ಹಾಗೂ ಇನ್ನಿತರ ಗಣ್ಯರು ಮುಖ್ಯ ಆತಿಥಿಗಳಾಗಿ ಬಾಗವಹಿಸಲಿದ್ದಾರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುಳ್ಯ ತಾಲೂಕು ಸಮಿತಿಯು ವಿನಂತಿಸಿಕೊಳ್ಳುತ್ತಿದೆ ಎಂದು ಸುಳ್ಯ ವಲಯ ಪಾಪ್ಯುಲರ್ ಫ್ರಂಟ್ ಅಧ್ಯಕ್ಷರಾಗಿರುವ ಹಮೀದ್ ಪೆರಾಜೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

To Top
error: Content is protected !!
WhatsApp chat Join our WhatsApp group