ರಾಷ್ಟ್ರೀಯ ಸುದ್ದಿ

ಟಿವಿ ಸ್ಟುಡಿಯೋದಲ್ಲೇ ಮೌಲ್ವಿಗೆ ದೈಹಿಕ ಹಲ್ಲೆ ನಡೆಸಲು ಮುಂದಾದ ಆರೆಸ್ಸೆಸ್ ಮುಖಂಡ!

ವರದಿಗಾರ (ಫೆ 15) :  ‘ನ್ಯೂಸ್ 24’ ಎಂಬ ಚಾನೆಲಿನ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೌಲ್ವಿಯೊಬ್ಬರಿಗೆ ಆರೆಸ್ಸೆಸ್ ಸಿದ್ಧಾಂತಜ್ಞ ಹಾಗೂ ಪ್ರಚಾರಕ ಸಂಗೀತ್ ರಾಗಿ ಎನ್ನುವ ವ್ಯಕ್ತಿ ಸ್ಟುಡಿಯೋದಲ್ಲೇ ದೈಹಿಕ ಹಲ್ಲೆ ನಡೆಸಲು ಮುಂದಾಗಿದ್ದು, ಇದರ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

‘ನ್ಯೂಸ್ 24’ ನಲ್ಲಿ ನಡೆಯುತ್ತಿದ್ದ ಚರ್ಚೆಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಗೀತ್ ರಾಗಿ, ಕಾಶ್ಮೀರದಲ್ಲಿ 370ನೇ ಹಾಗೂ 35ನೇ ವಿಧಿಯನ್ನು “ಸಾಂವಿಧಾನಿಕ ವಂಚನೆ”, ಮಾತ್ರವಲ್ಲ ಅವುಗಳನ್ನು ರದ್ದುಪಡಿಸಬೇಕು ಎಂದು ಹೇಳಿದಾಗ, ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿದ್ದ ಮೌಲಾನಾ ಸಾಜಿದ್ ರಶೀದಿ, ‘ಕಾಶ್ಮೀರದಲ್ಲಿ ನಿಮ್ಮದೇ ಸರಕಾರವಿದೆಯಲ್ಲ, 370ನೇ ವಿಧಿಯನ್ನು ರದ್ದುಪಡಿಸಬೇಡಿ ಎಂದು ನಿಮ್ಮನ್ನು ತಡೆದವರಾರೆಂದು ಕೇಳಿದಾಗ ಉತ್ತರವಿಲ್ಲದೆ ಕೋಪ ನೆತ್ತಿಗೇರಿಸಿಕೊಂಡ ಸಂಗೀತ್ ರಾಗಿ, ಸಾಜಿದ್ ರಶೀದಿಯವರನ್ನು “ಮೂರ್ಖ” , “ಅಶಿಕ್ಷಿತ” ಹಾಗೂ “ಪಾಕಿಸ್ತಾನದ ಏಜಂಟ್” ಎನ್ನುತ್ತಾ ವೈಯುಕ್ತಿಕ ದಾಳಿಗಿಳಿಯುತ್ತಾನೆ. ಆಗ ರಶೀದಿಯವರು ಮಾತಿನಲ್ಲಿ ಹಿಡಿತವಿರಲಿ ಎನ್ನುತ್ತಾರೆ. ಕಾರ್ಯಕ್ರಮ ನಿರೂಪಕ ಮಾನಕ ಗುಪ್ತಾ ಕೂಡಾ ಸಂಗೀತ್ ನನ್ನು ಸುಮ್ಮನಿರುವಂತೆ ಹೇಳುತ್ತಲೇ ಕಾರ್ಯಕ್ರಮದ ಮಧ್ಯೆ ಜಾಹೀರಾತು ಘೋಷಿಸುತ್ತಾರೆ.

ಜಾಹೀರಾತು ಅವಧಿಯಲ್ಲಿ ತನ್ನ ಸೀಟಿನಿಂದ ಎದ್ದ ಸಂಗೀತ್, ಮೌಲಾನಾ ಸಾಜಿದ್ ರಶೀದಿಯವರತ್ತ ಸಾಗಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಲು ಮುಂದಾಗುತ್ತಾನೆ. ಸ್ಟುಡಿಯೋದ ಹಲವು ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಅವರಿಬ್ಬರನ್ನೂ ದೂರ ಸರಿಸುವ ದೃಶ್ಯಗಳು ವೀಡಿಯೋದಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಈ ಆರೆಸ್ಸೆಸ್ ಮುಖಂಡ, ತನಗೆ ಕೇಳಿದ ಪ್ರಶ್ನೆಗೆ ಉತ್ತರವಿಲ್ಲದಾದಾಗ ಕೋಪೋದ್ರಿಕ್ತನಾಗಿ ಪ್ರಶ್ನೆ ಕೇಳಿದವರ ಮೇಲೆಯೆ ರೇಗಿ ಹೋಗಿ ದೈಹಿಕ ಹಲ್ಲೆ ನಡೆಸಿ ಸುಮ್ಮನಾಗಿಸಲು ಪ್ರಯತ್ನ ಪಡುತ್ತಿರುವ ದೃಶ್ಯ ಮಾತ್ರ ಆರೆಸ್ಸೆಸ್ ನ ನೈಜ ಸಂಸ್ಕೃತಿಯನ್ನು ಪ್ರತಿಬಿಂಬಿಸಿದಂತಿತ್ತು ಮತ್ತು ಪ್ರಸಕ್ತ ದೇಶದ ಪರಿಸ್ಥಿತಿಯನ್ನು ನೆನಪಿಸಿತು ಎನ್ನುತ್ತಿದ್ದಾರೆ ವೀಡಿಯೋವನ್ನು ವೀಕ್ಷಿಸಿದ ಜನರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group