ವಿದೇಶ ಸುದ್ದಿ

ಮೋದಿ ಎಡವಟ್ಟು ! ಯುಎಇ ಮತ್ತು ದುಬೈಯನ್ನು ಎರಡು ಪ್ರತ್ಯೇಕ ದೇಶಗಳೆಂದು ಹೇಳಿದ ವೀಡಿಯೋ ವೈರಲ್ !!

ವರದಿಗಾರ (ಫೆ 14) : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಲಿ ಸರಕಾರದ ಅಧಿಕೃತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ, ”ನಾನು ಎರಡನೇ ಬಾರಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ನನಗೆ ಭಾರತದಲ್ಲಿದ್ದೇನೆಂಬ ಭಾವನೆ ಮೂಡುತ್ತದೆ. ಸುಮಾರು 12 ಲಕ್ಷ ಭಾರತೀಯರು ತಮ್ಮ ಮನೆಗಳಿಂದ ದೂರವಾಗಿ ದುಬೈಯಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಅದೇ ರೀತಿ ಯುಎಇಯಲ್ಲಿ ಕೂಡಾ 33 ಲಕ್ಷ ಭಾರತೀಯರು ತಮ್ಮ ನೆಲೆ ಕಂಡುಕೊಂಡಿದ್ದಾರೆ. ಇದಕ್ಕಾಗಿ ಭಾರತ, ಯು ಎ ಇ ಹಾಗೂ ದುಬೈ ಸರಕಾರಗಳಿಗೆ ಕೃತಜ್ಞನಾಗಿರುತ್ತದೆ’ ಎಂದು ಹೇಳಿದ್ದರು.

ವಾಸ್ತವದಲ್ಲಿ ಒಟ್ಟು ಏಳು ಸಂಸ್ಥಾನ ರಾಜ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಡಿಯಲ್ಲಿ ಬರುತ್ತದೆ. ಅವುಗಳಲ್ಲಿ ದುಬೈ ಕೂಡಾ ಒಂದಾಗಿದೆ. ಆದರೆ ಮೋದಿ ಮಾತ್ರ ಯುಎಇ ಹಾಗೂ ದುಬೈಯನ್ನು ಎರಡು ಪ್ರತ್ಯೇಕ ದೇಶಗಳೆನ್ನುತ್ತಾ ಯಾರೋ ಬರೆದುಕೊಟ್ಟ ಭಾಷಣವನ್ನು ಓದಿ ಎಡವಟ್ಟು ಮಾಡಿಕೊಂಡಿದ್ದಾರೆ. ಈಗ ಅದರ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಶೇರ್ ಆಗುತ್ತಿದೆದ್ದಾರೆ. ಯುಎಇಯ ಏಳು ಸಂಸ್ಥಾನ ರಾಜ್ಯಗಳೆಂದರೆ, ಅಬುಧಾಬಿ, ದುಬೈ, ಅಜ್ಮಾನ್, ಶಾರ್ಜಾ, ಫುಜೈರಾ, ರಾಸ್ ಅಲ್ ಖೈಮಾ ಹಾಗೂ ಉಮ್ಮುಲ್ ಖುವೈನ್. ಇಷ್ಟೊಂದು ಪ್ರಮಾಣದಲ್ಲಿ ಅನಿವಾಸಿಗಳಿರುವ ವಿಶ್ವದ ಅಗ್ರಗಣ್ಯ ದೇಶವೊಂದರ ಪ್ರಧಾನಿಯೊಬ್ಬರಿಗೆ ಇಂತಹಾ ಪ್ರಾಥಮಿಕ ಅರಿವು ಇಲ್ಲದೆ ಹೋದದ್ದು ಮಾತ್ರ ವಿಪರ್ಯಾಸವೆಂದು ಜನರಾಡುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ವೀಡಿಯೋ

To Top
error: Content is protected !!
WhatsApp chat Join our WhatsApp group