ವಿದೇಶ ಸುದ್ದಿ

‘ಜೈ ಶ್ರೀ ರಾಮ್’ ಹೇಳಿಕೆಯ ಸುಳ್ಳು ಸುದ್ದಿಗಾಗಿ ‘ಟೈಮ್ಸ್ ನೌ’ ಹಾಗೂ ‘ಝೀ ನ್ಯೂಸ್’ ಚಾನೆಲನ್ನು ಅಣಕಿಸಿದ ಮಧ್ಯಪ್ರಾಚ್ಯದ ‘TRT ವರ್ಲ್ಡ್ ನ್ಯೂಸ್’ !

ವರದಿಗಾರ (ಫೆ 14) :  ಫೆಬ್ರವರಿ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಬುಧಾಬಿ ಪ್ರವಾಸ ಆರಂಭವಾಗುವುದಕ್ಕಿಂತ ಸ್ವಲ್ಪ ಮೊದಲು ಭಾರತದ ಸುದ್ದಿ ಚಾನೆಲ್ ಗಳಾದ ಟೈಮ್ಸ್ ನೌ ಹಾಗೂ ಝೀ ನ್ಯೂಸ್ ಚಾನೆಲ್ ಗಳು, ಅಬುಧಾಬಿಯ ರಾಜಕುಮಾರ ‘ಜೈ ಶ್ರೀ ರಾಮ್’ ಹೇಳಿದ್ದಾರೆಂದು ತೋರಿಸುವ ಹಳೆಯ ವೀಡೀಯೋ ಒಂದನ್ನು ಪ್ರಸಾರಿಸಿತ್ತು. ವಾಸ್ತವದಲ್ಲಿ ಅದು ರಾಜಕುಮಾರನಾಗಿರದೆ, ಅಬುಧಾಬಿಯ ಒರ್ವ ರಾಜಕೀಯ ಚಿಂತಕನಾದ ಸುಲ್ತಾನ್ ಅಲ್ ಖಾಸಿಮಿಯಾಗಿದ್ದರು. ಭಾರತದ ಈ ರೀತಿಯ ಸುಳ್ಳು ಪ್ರಚಾರದ ಮಾಧ್ಯಮಗಳಾದ ‘ಝೀ ನ್ಯೂಸ್’ ಹಾಗೂ ‘ಟೈಮ್ಸ್ ನೌ’ ಚಾನೆಲನ್ನು ‘ಗಲ್ಫ್ ನ್ಯೂಸ್’ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ವರದಿ ಪ್ರಕಟಿಸಿತ್ತು. ಇದೇ ವರದಿಯನ್ನು ದೆಹಲಿಯಲ್ಲಿರುವ ಯು ಎ ಇ ಯ ರಾಯಭಾರ್ಯ ಕಛೇರಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಟ್ವೀಟ್ ಮಾಡಲಾಗಿತ್ತು. ಇದೀಗ ಮಧ್ಯ ಪ್ರಾಚ್ಯದ ಖ್ಯಾತ ಚಾನೆಲ್ ಆಗಿರುವ  ‘TRT ವರ್ಲ್ಡ್ ನ್ಯೂಸ್’ ಕೂಡಾ ವೀಡಿಯೋ ಒಂದನ್ನು ಮಾಡಿ ಈ ಸುಳ್ಳು ಬುರುಕ ಚಾನೆಲ್ ಗಳ ಕಾಲೆಳೆದಿದೆ.

‘TRT ವರ್ಲ್ಡ್ ನ್ಯೂಸ್’ ವೀಡಿಯೋದಲ್ಲಿ ಭಾರತದ ಮಾಧ್ಯಮಗಳ ಸುಳ್ಳು ವರದಿಗೆ ಪ್ರತಿಕ್ರಿಯೆಯೆಂಬಂತೆ ವ್ರೆಸ್ಲರ್ ಹಾಗೂ ಹಾಲಿವುಡ್ ನಟ ಡ್ವಾಯ್ನ್ ಜಾನ್ಸನ್ (ರಾಕ್) ಕಣ್ಸನ್ನೆ ಹಾಗೂ ಇತರೆ ಹಾಸ್ಯ ರೂಪದ ವೀಡಿಯೋ ತುಣುಕುಗಳನ್ನು ಹಾಕಿ ಅಣಕವಾಡಿದೆ. ಭಾರತದ ಕೆಲವೊಂದು ಸುದ್ದಿ ತಾಣಗಳು ಸತ್ಯವನ್ನು ತಿಳಿಸುವ ಪ್ರಯತ್ನ ಮಾಡಿತಾದರೂ ‘ಟೈಮ್ಸ್ ನೌ’ ಚಾನೆಲ್ ತನ್ನ ಸುಳ್ಳಿನ ಟ್ವೀಟನ್ನು ಮತ್ತೊಮ್ಮೆ ರಿಟ್ವೀಟ್ ಮಾಡಿದ್ದನ್ನು ‘TRT ವರ್ಲ್ಡ್ ನ್ಯೂಸ್’ ಉಲ್ಲೇಖಿಸಿದೆ.

ಒಟ್ಟಿನಲ್ಲಿ ಭಾರತದ ಕೆಲ ಖರೀದಿಗೊಳಪಟ್ಟ ಚಾನೆಲ್ ಗಳ ಸುಳ್ಳು ಸುದ್ದಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಇತರೆ ಚಾನೆಲ್ ಗಳನ್ನೂ ಕೂಡಾ ಸಂಶಯದಿಂದ ನೋಡುವಂತಾಗಿರುವುದು ಮಾತ್ರ ಸುಳ್ಳಲ್ಲ. ಮೊದಲು ಈ ಸುಳ್ಳು ಸುದ್ದಿಗಳ ಸಾಂಕ್ರಾಮಿಕ ರೋಗ ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಅದೀಗ ಜಾಗತಿಕ ಮಟ್ಟದಲ್ಲೂ ಸುದ್ದಿ ಮಾಡುತ್ತಿರುವುದು ಹಾಗೂ ಅದರ ಸತ್ಯಾಸತ್ಯತೆಯನ್ನು ವಿದೇಶಿ ಮಾಧ್ಯಮಗಳು ಹೊರ ಹಾಕುತ್ತಿರುವುದು ಮಾತ್ರ ನಮ್ಮ ದುರಂತವೆನ್ನದೆ ವಿಧಿಯಿಲ್ಲ.

ವೀಡಿಯೋ ವೀಕ್ಷಿಸಿ

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group