ಜಿಲ್ಲಾ ಸುದ್ದಿ

ಮಂಜೂರಾದ ಹಕ್ಕು ಪತ್ರವನ್ನು ಮುತವರ್ಜಿ ವಹಿಸಿ ವಿತರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಅಭಿನಂದನೆಗಳು : ಎಸ್ ಡಿ ಪಿ ಐ

ವರದಿಗಾರ (ಫೆ 14) : ಕರ್ನಾಟಕ ಸರಕಾರದ ಕಂದಾಯ ಇಲಾಖೆ ಬೆಂಗಳೂರು ರವರ ಅಧಿಸೂಚನೆ ಆರ್.ಡಿ 345/ಎಲ್ ಜಿಪಿ 2012 ಬೆಂಗಳೂರು ದಿನಾಂಕ 28-08-2015 ರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮನೆ ಅಡಿ ಸ್ಥಳದ ಸಕ್ರಮೀಕರಣ(ಕ.ಭೂ.ಅ.ಕಲಂ94ಸಿಸಿ)ಮಂಜೂರು ಮಾಡುವ ಬಗ್ಗೆ ಆದೇಶವಾಗಿರುತ್ತದೆ.

ಈ ಆದೇಶದಂತೆ ಮಂಗಳೂರು ತಾಲೂಕಿನಾದ್ಯಂತ 15000 ಕ್ಕೂ ಮೇಲ್ಪಟ್ಟು ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಇದರಲ್ಲಿ 10000 ಅರ್ಜಿಗಳು ಮಂಜೂರಾಗದೆ ಉಳಿದಿದೆ ಅದೇ ರೀತಿ ಮಂಜುರಾದ ಸುಮಾರು 5000 ದಷ್ಟು ಫಲಾನುಭವಿಗಳಿಗೆ ಕೊಡಬೇಕಾದ ಹಕ್ಕು ಪತ್ರವನ್ನು ವಿತರಿಸದೇ (ವಿಲೇವಾರಿ) ಮಾಡದೆ ವಿಳಂಬ ಮಾಡುತ್ತಿದ್ದು ಇದು ಬಡವರಿಗೆ ಸಿಗಬೇಕಾದ ಹಕ್ಕುಗಳ ಉಲ್ಲಂಘನೆಯಾಗಿದೆ.
ಆದುದರಿಂದ ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮಂಜೂರಾದ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ಕೂಡಲೇ ವಿತರಿಸಬೇಕು ಹಾಗೂ ಉಳಿದಿರುವ ಅರ್ಜಿಗಳನ್ನು ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿ ಅತೀ ಶೀಘ್ರವಾಗಿ ಫಲಾನುಭವಿಗಳಿಗೆ ಮಂಜೂರು ಮಾಡಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾ ನಿಯೋಗವು ಒಂದು ತಿಂಗಳ ಹಿಂದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರ ನಂತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡ ಮಾನ್ಯ ಜಿಲ್ಲಾಧಿಕಾರಿಗಳು ಸ್ವತಃ ಮುತವರ್ಜಿವಹಿಸಿ ಮಂಗಳೂರು ತಾಲೂಕಿನ ಹಲವು ಕಡೆ ಮಂಜೂರಾದ ಹಕ್ಕು ಪತ್ರದ ವಿತರಣೆಯನ್ನು ನಡೆಸಲು ಮುಂದಾಗಿರುವುದು ಅಭಿನಂದಾರ್ಹ ಕೆಲಸ ವಾಗಿದೆ ಜಿಲ್ಲಾಧಿಕಾರಿಗಳ ಈ ಕೆಲಸ ಕಾರ್ಯವನ್ನು ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿಯು ಅಭಿನಂದಿಸುತ್ತದೆ.
ಅದೇ ರೀತಿ ಜಿಲ್ಲಾಧಿಕಾರಿಗಳು ಇನ್ನೂ ಕೂಡ ಕಾರ್ಯಪ್ರವೃತ್ತರಾಗಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಮತ್ತು ಈಗಾಗಲೇ ಮಂಜೂರಾದ ಎಲ್ಲಾ ಫಲಾನುಭವಿಗಳಿಗೆ ಆದಷ್ಟು ಬೇಗ ಹಕ್ಕು ಪತ್ರ ವಿತರಿಸಬೇಕೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group