ಅನಿವಾಸಿ ಕನ್ನಡಿಗರ ವಿಶೇಷ

ಉಮ್ರಾ ಯಾತ್ರಿ ಮದೀನಾದಲ್ಲಿ ನಿಧನ : ಕೆ ಸಿ ಎಫ್ ಮದೀನಾ ನೇತೃತ್ವದಲ್ಲಿ ಅಂತ್ಯಕ್ರಿಯೆ

ಮದೀನಾ, ಸೌದಿ ಅರೇಬಿಯಾ: ಪವಿತ್ರ ಉಮ್ರಾ ಹಾಗೂ ಮದೀನಾ ಝಿಯಾರತ್ ಗೆ ಆಗಮಿಸಿದ್ದ ಯಾತ್ರಿಕರೊಬ್ಬರು ಮದೀನಾದಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.  ಶಿವಮೊಗ್ಗ ಮೂಲದ ನೂರ್ ಮುಹಮ್ಮದ್ (65) ಮೃತ ಹೊಂದಿದವರಾಗಿದ್ದಾರೆ.  ಮಹಾರಾಷ್ಟ್ರದ ಉಮ್ರಾ ಗ್ರೂಪ್ ಮೂಲಕ ಆಗಮಿಸಿದ ಮುಹಮ್ಮದ್‌ ಮಕ್ಕಾದಲ್ಲಿ ಉಮ್ರಾ   ಕರ್ಮ ನಿರ್ವಹಿಸದ್ದು,ಆ ಬಳಿಕ ಮದೀನಾಕ್ಕೆ ಆಗಮಿಸಿದ್ದು, ಬುಧವಾರದಂದು ತನ್ನ ಕೊಠಡಿಯಲ್ಲಿ ಮೃತ ಹೊಂದಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಸಿ.ಎಫ್ ಕಾರ್ಯಕರ್ತರು ಮೃತರ ದಫನ ಕಾರ್ಯಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಎಲ್ಲಾ ಕಡತಗಳನ್ನು ಸರಿಪಡಿಸಿದರು. ಗುರುವಾರದಂದು ಸುಬುಹ್ ನಮಾಜಿನ ಬಳಿಕ ಜನ್ನತುಲ್ ಬಖೀಯದಲ್ಲಿ ದಫನ ಮಾಡಲಾಯಿತು.  ಮೃತ ನೂರ್ ಮುಹಮ್ಮದ್ ಅವರೊಂದಿಗೆ ಅವರ ಧರ್ಮಪತ್ನಿಯು ಕೂಡ ಉಮ್ರಾ ನಿರ್ವಹಿಸಲು ಶಿವಮೊಗ್ಗ ದಿಂದ ಆಗಮಿಸಿದ್ದು, ಪತಿಯ ವಿಯೋಗದಿಂದ  ತೀವ್ರ ನೊಂದಿರುವ ಮೃತರ ಪತ್ನಿ ಹಾಗೂ ಸಂಬಂಧಿಕರಿಗೆ ಮದೀನಾ ಕೆ.ಸಿ.ಎಫ್ ಕಾರ್ಯಕರ್ತರು ಸಾಂತ್ವನ ಹೇಳಿ ಆಸರೆಯಾದರು.  ಮೃತರು ಪತ್ನಿ, ನಾಲ್ಕು ಗಂಡು ಮಕ್ಕಳು, ಹಾಗೂ ಎರಡು ಹೆಣ್ಣು ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

ವರದಿ : ಲುಕ್ಮಾನುಲ್ ಹಕೀಮ್

To Top
error: Content is protected !!
WhatsApp chat Join our WhatsApp group