ರಾಷ್ಟ್ರೀಯ ಸುದ್ದಿ

“ಯುದ್ಧಕ್ಕೆ ತಯಾರಾಗಲು ಸೈನ್ಯಕ್ಕೆ 6-7 ತಿಂಗಳು ಬೇಕಾಗಬಹುದು, ಆರೆಸ್ಸೆಸ್ 2-3 ದಿನಗಳಲ್ಲಿ ತಯಾರಾಗಬಹುದು” : ಆರೆಸ್ಸೆಸ್ ನಾಯಕನಿಂದ ಸೈನ್ಯಕ್ಕೆ ಅವಮಾನ

ವರದಿಗಾರ(11-02-2018): ತಮ್ಮನ್ನು ತಾವೇ ದೇಶಭಕ್ತರೆಂದು ಹೇಳಿಕೊಳ್ಳುವ ಮತೀಯ ಸಂಘಟನೆಯಾದ ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗ್ವತ್ ತನ್ನ ಸಂಘಟನೆಯ ಕಾರ್ಯಕರ್ತರ ವಿಶೇಷತೆಯನ್ನು ಕೊಂಡಾಡುವ ಭರದಲ್ಲಿ ಸೈನ್ಯಕ್ಕೆ ಅವಮಾನ ಮಾಡಿದ್ದಾರೆ.

ಬಿಹಾರದ ಮುಝಫ್ಫರ ಪುರದಲ್ಲಿ ಆಯೋಜಿಸಲಾದ ಆರೆಸ್ಸೆಸಿನ 5 ದಿನಗಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಮೋಹನ್ ಭಾಗ್ವತ್, ” ಯುದ್ಧದ ಸಂಧರ್ಭದಲ್ಲಿ ತಯಾರಾಗಲು ಸೈನ್ಯವು 6-7 ತಿಂಗಳು ತೆಗೆದುಕೊಳ್ಳಬಹುದು. ಆದರೆ, ಆರೆಸ್ಸೆಸ್ ಕೇವಲ 2-3 ದಿನಗಳಲ್ಲಿ ತಯಾರಾಗಬಹುದು” ಎಂದು ಹೇಳಿದ್ದಾರೆ. ಸಂವಿಧಾನ ಹಾಗೂ ಕಾನೂನು ಅನುಮತಿ ನೀಡಿದಲ್ಲಿ, ಯುದ್ಧದ ಸಂಧರ್ಭದಲ್ಲಿ ಆರೆಸ್ಸೆಸಿನ ಸ್ವಯಂಸೇವಕರು ಸೈನ್ಯಕ್ಕಿಂತಲೂ ಮೊದಲು ತಯಾರಾಗಿ ಸ್ಥಳದಲ್ಲಿ ಜಮಾಯಿಸಬಹುದೆಂದು ಮೋಹನ್ ಭಾಗ್ವತ್ ತಿಳಿಸಿದರು.

ಆರೆಸ್ಸೆಸ್ ನಾಯಕನ ಭಾರತೀಯ ಸೈನ್ಯವನ್ನು ಅವಮಾನಿಸುವಂತಹಾ ಈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪ್ರಜ್ಞಾವಂತರು #RSSInsultsArmy ಉಪಯೋಗಿಸಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಲವರು ಬಾಂಬ್ ಸ್ಪೋಟದಂತಹ ದೇಶದ್ರೋಹಿ ಚಟುವಟಿಕೆಗಳಲ್ಲಿ ಆರೋಪಿಗಳಾಗಿರುವ ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಸ್ವಾತಂತ್ರ್ಯದ 5 ದಶಕಗಳವರೆಗೆ ತ್ರಿವರ್ಣ ಧ್ವಜವನ್ನು ಹಾರಾಡಿಸದ ಆರೆಸ್ಸೆಸ್ ನ ‘ನಕಲಿ ದೇಶಪ್ರೇಮ’ದ ಬಗ್ಗೆ ನೆನಪಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group