ಸುತ್ತ-ಮುತ್ತ

ಅಬ್ದುಲ್ ಮಜೀದ್ ರಿಂದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ

ವರದಿಗಾರ (ಫೆ 8) :  ಕಳೆದ  2013 ರ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ವಿರೋಚಿತ ಸೋಲೊಪ್ಪಿಕೊಂಡ ಮರುದಿನದಿಂದಲೇ ಅಬ್ದುಲ್ ಮಜೀದ್ ರವರು, ತನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆಗಳ ಕುರಿತು ಕ್ಷೇತ್ರದ ವಾರ್ಡಿನಲ್ಲಿರುವ ತನ್ನ ಪಕ್ಷದ ಇತರ ಸದಸ್ಯರೊಡನೆ ಸೇರಿಕೊಂಡು ಹಗಲಿರುಳು ದುಡಿಯುತ್ತಿರುವುದು ಕ್ಷೇತ್ರದ ಮತದಾರರ ಮನಗೆದ್ದಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಬ್ದುಲ್ ಮಜೀದ್ ರವರು, ಚುನಾವಣೆ ಗೆದ್ದುಕೊಂಡು ಅಧಿಕಾರದಲ್ಲಿರುವ ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಬ್ದುಲ್ ಮಜೀದ್ ರವರು ಎಸ್.ಡಿ.ಪಿ.ಐ ಕಾರ್ಪೋರೇಟರ್ ರೇಷ್ಮಾ ಜಬೀನ್ ಪ್ರತಿನಿಧಿಸುತ್ತಿರುವ ನರಸಿಂಹರಾಜ ಕ್ಷೇತ್ರದ ವಾರ್ಡ್ ಸಂಖ್ಯೆ 59ರ ಗೌಸಿಯಾ ನಗರದ ಹೈದರಲಿ ಬ್ಲಾಕ್ ನಲ್ಲಿ ನಡೆಯುತ್ತಿರುವ  ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಅದರ ಗುಣಮಟ್ಟವನ್ನು ಪರಿಶೀಲಿಸಿ ಗುತ್ತಿಗೆದಾರರೊಂದಿಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡಿದರು.  ಸುಲ್ತಾನ್ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಅನುಕೂಲಕ್ಕಾಗಿ ಹೊಸ ಕೊಳವೆ ಬಾವಿ ಪಂಪ್ ಕಾಮಗಾರಿ ನಡೆಯುವ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು .

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಜಮೀಲ್ ಖಾನ್, ಕಾರ್ಯದರ್ಶಿ ಇಂತಿಯಾಝ್ ಅಹ್ಮದ್ ಶರೀಫ್,ಅಕ್ರಮ್ ಶರೀಫ್,ಏಜಾಝ್ ಖಾನ್,ಎಸ್.ಡಿ.ಪಿ.ಐ ಕಾರ್ಯಕರ್ತರು, ಹಾಗೂ ಸ್ಥಳೀಯ ನಾಗರೀಕರು ಉಪಸ್ಥಿತಿತರಿದ್ದರು.

To Top
error: Content is protected !!
WhatsApp chat Join our WhatsApp group