ಸುತ್ತ-ಮುತ್ತ

ಮುಂಬರುವ Viu (ವಿಯು) ಸೆಲೆಬ್ರಿಟಿ ಮಾತುಕತೆಯಲ್ಲಿ ಭಾಗವಹಿಸಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ವರದಿಗಾರ (ಫೆ 8) : ನಂ.1 ಯಾರಿ ವಿತ್ ರಾಣಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ವಿಯು ಇದೀಗ ಮತ್ತೆ ಟ್ರ್ಯಾಕ್ ಗೆ ಮರಳಿದ್ದು, ಇದೀಗ ಕರ್ನಾಟಕದ ಕಣ್ಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೊಂದಿಗೆ ಟಾಕ್ ಶೋ ಅನ್ನು ಆಯೋಜಿಸಿದ್ದು, ಶಿವರಾಜ್ ಕುಮಾರ್ ಜೊತೆ ‘ನಂ.1 ಯಾರೀ ವಿತ್ ಶಿವಣ್ಣ ಎಂಬ ಕಾರ್ಯಕ್ರಮವನ್ನು ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಗಳ ನಿಜಜೀವನ ಮತ್ತು ಅವರ ಸ್ನೇಹಿತರೊಂದಿಗೆ ಮಾತುಕತೆ ನಡೆಯಲಿದೆ.

ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಈ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಉತ್ತಮವಾದ  ಮಾತುಕಥೆ ನಡೆಸುತ್ತಾ ಆಟವಾಡುತ್ತಾ ವೀಕ್ಷಕರನ್ನು ಮನರಂಜಿಸಲಿದ್ದಾರೆ. ಈ‌ಕಾರ್ಯಕ್ರಮದಲ್ಲಿ ಉಪೇಂದ್ರ, ಶ್ರುತಿ‌ ಹರಿಹರನ್, ಶ್ರದ್ಧಾ ಶ್ರೀನಾಥ್, ಹಾಗೂ ಶಿವರಾಜ್ ಕುಮಾರ್ ಸ್ನೇಹಿತರು ಹಾಗೂ ವೀಕ್ಷಕರು ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ಸ್ಪೆಷಲ್‌ ವೀಡಿಯೊಗಳನ್ನು ಆನಂದಿಸಬಹುದಾಗಿದೆ.

ಈ ಕಾರ್ಯಕ್ರಮವು ವಿಯು ಆ್ಯಾಪ್ ನಲ್ಲಿ ಪ್ರಸಾರವಾಗಲಿದ್ದು, ಅಲ್ಲದೇ ಸ್ಟಾರ್ ಸುವರ್ಣ ಚಾನೆಲ್ ನಲ್ಲೂ ಪ್ರಸಾರವಾಗಲಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group