ರಾಷ್ಟ್ರೀಯ ಸುದ್ದಿ

ಮುಸ್ಲಿಮರು ಭಾರತದಲ್ಲಿರಬಾರದು; ಪಾಕಿಸ್ತಾನ-ಬಾಂಗ್ಲಾದೇಶಕ್ಕೆ ಹೋಗಲಿ: ಬಿಜೆಪಿ ಸಂಸದನ ಅತಿರೇಕದ ಬಯಕೆ

ವರದಿಗಾರ (ಫೆ.7): ‘ಮುಸ್ಲಿಮರು ಭಾರತದಲ್ಲಿರಬಾರದು. ಅವರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕು’ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ತನ್ನ ಅತಿರೇಕದ ಬಯಕೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಕರೆಯುವ ಯಾರನ್ನೇ ಆದರೂ ಶಿಕ್ಷಿಸಲು ಅನುವು ಮಾಡಿಕೊಡುವ ಕಾನೂನನ್ನು ರಚಿಸಬೇಕೆಂಬ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಯ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ, ಕಟಿಯಾರ್ ಮೇಲಿನ ಹೇಳಿಕೆ ನೀಡಿದ್ದಾರೆ.

“ದೇಶಕ್ಕೆ ಸ್ವಾತಂತ್ರ್ಯಗೊಂಡು 70 ವರ್ಷಗಳು ಕಳೆದರೂ ನನ್ನನ್ನು ‘ಪಾಕಿಸ್ತಾನಿ’ ಎಂದು ಕರೆಯಲಾಗುತ್ತಿರುವುದೇಕೆ? ನಾವು ಜಿನ್ನಾ ಆಹ್ವಾನವನ್ನು ತಿರಸ್ಕರಿಸಿದ್ದೆವು. ಈಗ ನನ್ನಿಚ್ಛೆಯಂತೆ ತ್ರಿವರ್ಣ ಧ್ವಜವನ್ನೂ ಹಾರಿಸಲು ನನಗಾಗುತ್ತಿಲ್ಲ. ಪರಿಶಿಷ್ಟ ಜಾತಿಗಳವರಿಗಿರುವಂತೆ ನಮಗೂ ಒಂದು ಕಾನೂನು ಏಕಿರಬಾರದು?” ಎಂದು ಉವೈಸಿ ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ವಿನಯ್ ಕಟಿಯಾರ್ “ವಂದೇ ಮಾತರಂ ಹಾಡಿಗೆ ಗೌರವ ನೀಡದವರನ್ನು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರನ್ನು, ಪಾಕಿಸ್ತಾನದ ಧ್ವಜ ಹಾರಿಸಿದವರನ್ನು ಶಿಕ್ಷಿಸಲು ಅನುವು ಮಾಡಿಕೊಡುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಬೇಕು’. ‘ಮುಸ್ಲಿಮರು ದೇಶವನ್ನು ಧಾರ್ಮಿಕ ತಳಹದಿಯಲ್ಲಿ ವಿಭಜಿಸಿದ್ದಾರೆ. ಈ ದೇಶವನ್ನು ವಿಭಜಿಸಿದವರು ಮುಸ್ಲಿಮರಾಗಿರುವುದರಿಂದ ಅವರೇಕೆ ಇಲ್ಲಿ ಇರಬೇಕು?, ಅವರಿಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ. ಅವರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಇಲ್ಲಿ ಅವರಿಗೇನು ಕೆಲಸ?” ಎಂದು ಪ್ರಶ್ನಿಸಿದ್ದಾರೆ.

To Top
error: Content is protected !!
WhatsApp chat Join our WhatsApp group