ಸುತ್ತ-ಮುತ್ತ

ಕರ್ನಾಟಕ ಬಾಯ್ಸ್ ಹೆಲ್ಪ್ ಲೈನ್ ವತಿಯಿಂದ ಬಡಹೆಣ್ಣು ಮಗಳ ಮದುವೆಗೆ ಮತ್ತು ವಿಧವೆಗೆ ಧನ ಸಹಾಯ

ಫ಼ೆ 6: ಸತತ ನಾಲ್ಕು ವರ್ಷಗಳಿಂದ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಬಾಯ್ಸ್ ಹೆಲ್ಪ್ ಲೈನ್ (ರಿ) ವತಿಯಿಂದ ಶಿವಮೊಗ್ಗ ಜಿಲ್ಲೆ ಆವಿನಹಳ್ಳಿಯ ಮೊಹಮ್ಮದ್ ಎಂಬುವವರು ಅನಾರೋಗ್ಯ ಪೀಡಿತರಾಗಿದ್ದು ಅವರ ಮಗಳ ಮದುವೆಗೆ ಮತ್ತು ಬೈಂದೂರು ತೊಂಡೆಮಕ್ಕಿ ನೂರ್ಜಹಾನ್ ಎಂಬುವವರಿಗೆ ತಲಾ 20,000 ರೂ ಗಳನ್ನು ನೀಡಲಾಯಿತು.

ಸಮಾಜ ಸೇವೆಯಲಿ ತೊಡಗಿಸಿಕೊಂಡಿರುವ ಕರ್ನಾಟಕ ಬಾಯ್ಸ್ ಹೆಲ್ಪ್ ಲೈನ್ (ರಿ) ಸಂಯೋಜಕರಾದ ನೂರುದ್ದೀನ್ ಆವಿನಹಳ್ಳಿ, ಮುಸ್ತಫ಼ ಶಿರೂರ್, ನಿಸ್ಸಾರ್ ಬಹರೈನ್ ರವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

To Top
error: Content is protected !!
WhatsApp chat Join our WhatsApp group