ರಾಜ್ಯ ಸುದ್ದಿ

ಝೈಬುನ್ನೀಸಾ ನಿಗೂಢ ಸಾವು : ಕುಟುಂಬದೊಂದಿಗೆ ಗೃಹ ಮಂತ್ರಿಯನ್ನು ಭೇಟಿಯಾದ ಎಸ್ ಡಿ ಪಿ ಐ ನಿಯೋಗ

ವರದಿಗಾರ (ಫೆ 6) : ಜನವರಿ 24 ರಂದು ಕೆ ಆರ್ ಪೇಟೆಯ ಅಲ್ಪ ಸಂಖ್ಯಾತ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಉಪ್ಪಿನಂಗಡಿ ಮೂಲದ ಬಾಲಕಿ ಝೈಬುನ್ನೀಸಾಳ ‘ಶೈಕ್ಷಣಿಕ ಹತ್ಯೆ’ ಯಾಗಿ ಎರಡು ವಾರಗಳು ಕಳೆದಿದೆ. ಆದರೆ ತನಿಖೆ ಸೂಕ್ತ ದಿಕ್ಕಿನಲ್ಲಿ ಸಾಗಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಝೈಬುನ್ನೀಸಾಳ ಕುಟುಂಬದೊಂದಿಗೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ , ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎ ಎಮ್ ಅಥಾವುಲ್ಲಾ ಒಳಗೊಂಡ ಎಸ್ ಡಿ ಪಿ ಐ ನಿಯೋಗ ಇಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತಲ್ಲದೆ, ಕುಟುಂಬದ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಿತು.

ಝೈಬುನ್ನೀಸಾಳ ತಾಯಿ ಝುಬೈದಾ ಈ ವೇಳೆ ಬೇಡಿಕೆಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅದು ಈ ಕೆಳಗಿನಂತಿದೆ

1. ಈ ‘ಶೈಕ್ಷಣಿಕ ಹತ್ಯೆ’ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು
2. ಝೈಬುನ್ನೀಸಾಳ ಸಾವಿಗೆ ಕಾರಣವಾದ ಶಿಕ್ಷಕನನ್ನು ವಜಾಗೊಳಿಸಬೇಕು ಹಾಗೂ ಅಲ್ಲಿನ ಸಹಶಿಕ್ಷಕರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು
3. ಸರಕಾರದಿಂದ ಕೂಡಲೇ 25 ಲಕ್ಷ ಪರಿಹಾರ ಒದಗಿಸಬೇಕು
4. ವಸತಿಶಾಲೆಯಲ್ಲಿ ನಿರಂತರವಾಗಿ ಮರುಕಳಿಸುತ್ತಿರುವ ವಿದ್ಯಾರ್ಥಿಗಳ ಸಾವಿನ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ‘ಟಾಸ್ಕ್ ಫೋರ್ಸ್’ ರಚಿಸಬೇಕು.

ಎಂಬಿತ್ಯಾದಿ ಬೇಡಿಕೆಗಳು ಒಳಗೊಂಡಿದೆ.

ಈ ಪ್ರಕರಣದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾಗಿರುವ ಮತ್ತೊಂದು ಅಂಶವೆಂದರೆ, ಆರೋಪಿತ ಶಿಕ್ಷಕ ರವಿ ಬಹಿರಂಗವಾಗಿ ಝೈಬುನ್ನೀಸಾಳನ್ನು ‘ ಬೆತ್ತಲೆಗೊಳಿಸಿ ಹೊಡೆಯುತ್ತೇನೆ’ ಎಂಬ ಬೆದರಿಕೆ ಹಾಕಿದ್ದರೂ ಆತನ ಮೇಲೆ ಇನ್ನೂ ಪೋಕ್ಸೋ ಪ್ರಕರಣವನ್ನು ದಾಖಲಿಸದೇ ಇರುವುದನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಇಂದು ಗೃಹ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಝೈಬುನ್ನೀಸಾಳ ತಾಯಿ ಝುಬೈದಾ, ಮುಜಾಹಿದ್ ಪಾಶಾ, ಎ ಎಮ್ ಅಥಾವುಲ್ಲ ಸೇರಿದಂತೆ ಸ್ಥಳೀಯ ಮುಖಂಡರಾದ ಅಬೂಬಕ್ಕರ್ ಎಂ ಪಿ, ಇಸ್ಮಾಯಿಲ್ ತಂಙಳ್ ಮತ್ತು ರಹಿಮಾನ್ ಉಪ್ಪಿನಂಗಡಿ ಕೂಡಾ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!