ಸುತ್ತ-ಮುತ್ತ

ಸೋಷಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್ (SDAU) ವತಿಯಿಂದ ಅಟೋ ಚಾಲಕನಿಗೆ ಧನ ಸಹಾಯ

ವರದಿಗಾರ (05-02-2018): ಇತ್ತೀಚೆಗೆ ನಗರದ ಯಕ್ಕೂರ್ ಬಳಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾಗಿ ಒಂದು ಕಣ್ಣು ಕಳೆದುಕೊಂಡ ದೇರಳಕಟ್ಟೆಯ ಆಟೋ ಚಾಲಕ ಶಾಕಿರ್ ಎಂಬವರಿಗೆ ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ವತಿಯಿಂದ ಫೆಬ್ರವರಿ 4 ರ ಆದಿತ್ಯವಾರ ಅವರ ನಿವಾಸದಲ್ಲಿ ಭೇಟಿ ನೀಡಿ ಧನ ಸಹಾಯ ಮತ್ತು ರೇಷನ್ ಸಾಮಾಗ್ರಿಗಳನ್ನು ನೀಡಲಾಯಿತು. ಕಣ್ಣು ಕಳೆದುಕೊಂಡು ತನ್ನ ಸಂಸಾರ ಸಾಗಿಸಲು ಮತ್ತು ಚಿಕಿತ್ಸೆಗೆ ಹಲವು ಖರ್ಚುಗಳನ್ನು ಭರಿಸಲು ಅಸಾಧ್ಯವಾಗಿರುವ ಇವರಿಗೆ, ಹಲವು ಸಚಿವರಿರುವ ಕ್ಷೇತ್ರದಲ್ಲಿದ್ದೂ ಸರ್ಕಾರದ ಯಾವುದೇ ಪರಿಹಾರವು ಸಿಗದೇ ಇರುವುದು ವಿಪರ್ಯಾಸವಾಗಿದೆ.

ಈ ಸಂದರ್ಭದಲ್ಲಿ ಎಸ್ಡಿಪಿಐ ಉಳ್ಳಾಲ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಬ್ಬಾಸ್ ಉಳ್ಳಾಲ,ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷರಾದ ನೌಫಾಲ್ ಕುದ್ರೋಳಿ, ಕಾರ್ಯದರ್ಶಿ ಶಿಹಾಬುದ್ದೀನ್, ಸಮಿತಿ ಸದಸ್ಯರುಗಳಾದ ಹಕೀಂ, ನಿಸಾರ್, ಕಮಾಲ್ ಮತ್ತು ಉಳ್ಳಾಲ ನಗರ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group