ಹನಿ ಸುದ್ದಿ

ಪ್ರಚೋದನಕಾರಿ ಭಾಷಣ: ಬಿಜೆಪಿ ಶಾಸಕನ ವಿರುದ್ದ ಪ್ರಕರಣ ದಾಖಲು

ವರದಿಗಾರ (ಜ.4): ಸಮುದಾಯಗಳ ನಡುವೆ ಸೌಹಾರ್ಧಕ್ಕೆ ದಕ್ಕೆಯನ್ನುಂಟು ಮಾಡುವ ಭಾಷಣದ ಮೂಲಕ ದ್ವೇಷವನ್ನು ಹರಡಿದ ಆರೋಪದಲ್ಲಿ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

‘ಇತರ ಸಮುದಾಯವರು ಏನಾದರೂ ತಪ್ಪು ಮಾಡಿದರೆ ಹಿಂದೂಗಳು ಲಾಠಿಯಂತಹ ಆಯುಧಗಳಿಂದ ಅವರ ಮೇಲೆ ದಾಳಿ ನಡೆಸಬೇಕು’ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣದ ಮೂಲಕ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಬಳಿಕ ಇವರ ಈ ಪ್ರಚೋದನಾತ್ಮಕ ಹೇಳಿಕೆ ಸಾಮಾಜಿಕ ತಾಣದಾದ್ಯಂತ ಹರಿದಾಡಿತ್ತು. ಕಾಸ್ ಗಂಜ್ ಘಟನೆಗೆ ಸಂಬಂಧಿಸಿ ಅವರು ಈ ಹೇಳಿಕೆಯನ್ನು ನೀಡಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group