ಪ್ರತಿಭೆ

ರಾಷ್ಟ್ರೀಯ ನೆಟ್ ಬಾಲ್: ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಕ್ಕೆ ಬೆಳ್ಳಿ

ವರದಿಗಾರ(3-2-2018): ಬಿಹಾರದ ಆರಾದಲ್ಲಿ ಶುಕ್ರವಾರದಂದು ಮುಕ್ತಾಯಗೊಂಡ 23ನೇ ರಾಷ್ಟ್ರೀಯ ಸಬ್ ಜೂನಿಯರ್ ನೆಟ್ ಬಾಲ್ ಚಾಂಪಿಯನ್’ಶಿಪ್ ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಬೆಳ್ಳಿ ಪದಕವನ್ನು ಗೆದ್ದುಕೊಂಡಿವೆ.

ಸೆಮಿಫೈನಲ್ ನಲ್ಲಿ 31-05 ಅಂಕಗಳ ಅಂತರದಿಂದ ಗುಜರಾತ್ ತಂಡದ ವಿರುದ್ಧ ಜಯಿಸಿದ್ದ ಕರ್ನಾಟಕ ಬಾಲಕಿಯರ ತಂಡ, ಫೈನಲ್ ನಲ್ಲಿ 28-44 ಅಂಕಗಳ ಅಂತರದಿಂದ ಹರಿಯಾಣ ತಂಡದ ಎದುರು ಸೋಲು ಅನುಭವಿಸಿತು.

ಸೆಮಿಫೈನಲ್ ನಲ್ಲಿ 36-12 ಅಂಕಗಳಿಂದ ಗುಜರಾತ್ ತಂಡವನ್ನು ಸೋಲಿಸಿದ್ದ ಕರ್ನಾಟಕ ಬಾಲಕರ ತಂಡ ಫೈನಲ್ ನಲ್ಲಿ 26-36 ಅಂಕಗಳ ಅಂತರದಿಂದ ಹರಿಯಾಣ ತಂಡದ ವಿರುದ್ಧ ಸೋಲು ಅನುಭವಿಸಿತು.

To Top
error: Content is protected !!
WhatsApp chat Join our WhatsApp group