ಸುತ್ತ-ಮುತ್ತ

ನುಸ್ರತುಲ್ ಮಸಾಕೀನ್ ಅಸೋಶಿಯೇಶನ್ ಕುಂದಾಪುರ ತಾಲೂಕು ವೆಬ್ ಸೈಟ್ ಬಿಡುಗಡೆ

ವರದಿಗಾರ (ಫೆ 4) : NMA ಕುಂದಾಪುರ ತಾಲೂಕು ರಿಯಾದ್ ನೂತನ ಪದಾಧಿಕಾರಿಗಳ ಸಭೆಯು NMA ರಿಯಾದ್ ಘಟಕದ ಅಧ್ಯಕ್ಷರಾದ ಸೈಯದ್ ಅಸ್ಲಂ ರವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ರಯ್ಯಾನ್ ರವರ ಕಿರಾತಿನೊಂದಿಗೆ ರಿಯಾದ್ ನ ಅಲ್ಮಾಝ್ ಸಭಾಂಗಣದಲ್ಲಿ ಅಧ್ದೂರಿಯಾಗಿ ನಡೆಯಿತು.

ಈ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ NMA ಕೇಂದ್ರ ಸಮೀತಿ ಅಧ್ಯಕ್ಷರಾದ ಹಾಜಿ ತಾಹೀರ್ ಹಸನ್ ರವರು NMA ವೆಬ್ ಸೈಟ್ ಬಿಡುಗಡೆಗೊಳಿಸಿದರು ವೇದಿಕೆಯಲ್ಲಿ ಇದ್ರೀಸ್ ಖುರೈಶಿ, ಖಾದರ್ ಕುದ್ರೋಳಿ, ಡಾ ತಾಹಿರುಲ್ಲ, ಇಬ್ರಾಹಿಂ ಬೆದ್ರೆ, ಒಮೇಗ ಕಂಪೆನಿಯ HR ಮೆನೇಜರ್ ಶಹರಾಣಿ ಹಾಗೂ NMA ಕುಂದಾಪುರ ತಾಲೂಕು ದಮ್ಮಾಮ್ ಘಟಕದ ಅಧ್ಯಕ್ಷ ಅಬುಬಕ್ಕರ್ ಮಹಮ್ಮದಾಲಿ ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು.

NMA ಕೇಂದ್ರ ಸಮೀತಿ ಅಧ್ಯಕ್ಷ ಹಾಜಿ ತಾಹಿರ್ ಹಸನ್ ಹಾಗೂ ಕಾರ್ಯದರ್ಶಿ ಅಬ್ದುಲ್ ರಹಿಂ ರವರ ಉಪಸ್ಥಿತಿಯಲ್ಲಿ ಸೈಯದ್ ಅಸ್ಲಾಂ ರವರ ನೇತ್ರತ್ವದಲ್ಲಿ NMA ಕುಂದಾಪುರ ತಾಲೂಕು ರಿಯಾದ್ ಘಟಕದ 2018 ರ ಹೊಸ ಸಮೀತಿ ರಚಿಸಲಾಯಿತು ಕಾರ್ಯದರ್ಶಿಯಾಗಿ ಅನ್ವರ್ ಅಲಿ ಹಸನ್, ಸಹಾಯಕರಾಗಿ ಅಬು ಮುಹಮ್ಮದ್ ಕುಂದಾಪುರ, ಗೌರವ ಅಧ್ಯಕ್ಷರಾಗಿ M ಅಬ್ದುಲ್ಲ ವಳಚ್ಚಿಲ್, ಉಪ ಅಧ್ಯಕ್ಷರಾಗಿ ಮೊಹಿದ್ದೀನ್ ಮುಲ್ಲಾ, ಖಜಾಂಜಿಯಾಗಿ ಸುಲೈಮಾನ್ ಕೋಡಿ ,ಸಹಾಯಕರಾಗಿ ಶಂಶುದ್ದೀನ್ ಸಾಗರ ,ಸಲಹೆಗಾರರನ್ನಾಗಿ ಇದ್ರೀಸ್ ಖುರೈಶಿ , ಖಾದರ್ ಕುದ್ರೋಳಿ ಹಾಗೂ ಲೆಕ್ಕ ಪರಿಶೋಧಕನಾಗಿ ಉಬೈದ್ ಕುರೈಶಿರವರನ್ನ ಹಾಗೂ ಶಮೀರ್ ಹಂಗಳೂರು, ಉಸ್ಮಾನ ಗುಲ್ವಾಡಿ, ಆದಮ್ ಸಾಸ್ತಾನ, ಇರ್ಫಾನ್ ತಲ್ಲೂರ್ , ಇಂತಿಯಾಝ್ ಕುಂದಾಪುರ ಹಾಗೂ ಸಿಧ್ದೀಕ್ ವಳಚ್ಚೀಲ್ ಇನ್ನಿತರನ್ನೊಳಗೊಂಡ ಹೊಸ ಸಮೀತಿ ರಚಿಸಲಾಯಿತು

ಈ ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ನಿರೂಪಿಸಿ, ಅಬೂ ಮುಹಮ್ಮದ್ ಕುಂದಾಪುರ ಧನ್ಯವಾದಗೈದರು

ವರದಿ : ಯಾಕೂಬ್ ಫೈರೋಝ್

To Top
error: Content is protected !!
WhatsApp chat Join our WhatsApp group