ರಾಷ್ಟ್ರೀಯ ಸುದ್ದಿ

ಯೋಗಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂದ ಯೋಗಿ ಸರಕಾರದ ಸಚಿವ

ವರದಿಗಾರ (ಜ.31): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಯೋಗಿ ಸರಕಾರದಲ್ಲಿರುವ ಸಚಿವ ಓಂಪ್ರಕಾಶ್ ರಾಜ್ ಭಾರ್ ಹೇಳಿದ್ದು, ಸ್ತತಃ ತನ್ನದೇ ಸಂಪುಟದಲ್ಲಿರವ ಸಚಿವರೊಬ್ಬರು ಸತ್ಯವನ್ನು ಬಿಚ್ಚಿಟ್ಟಿದ್ದು, ಯೋಗಿ ಸರಕಾರ ಮುಖಭಂಗಕ್ಕೊಳಗಾಗಿದೆ.

‘ಹಿಂದಿನ ಬಿಎಸ್ಪಿ ಮತ್ತು ಎಸ್ಪಿ ಸರಕಾರಗಳ ಅವಧಿಗೆ ಹೋಲಿಸಿದರೆ ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಅಧಿಕವಾಗಿದೆ ಎಂದು ಹೇಳಿದ್ದಾರೆ. ನಾನು ಸರಕಾರದ ಭಾಗವಾಗಿದ್ದರೂ, ಇದು ನನ್ನ ಸರಕಾರವಲ್ಲವೆಂದೂ ಅವರು ಹೇಳಿದ್ದಾರೆ. ನಾನು ಬಿಜೆಪಿ ಜೊತೆಯಲ್ಲಿ ಮೈತ್ರಿಯನ್ನು ಮಾತ್ರ ಮಾಡಿಕೊಂಡಿದ್ದೇನೆ’. ಎಂದು ಅವರು ಹೇಳಿವುದಾಗಿ ಮೂಲಗಳು ವರದಿ ಮಾಡಿದೆ.

ಬಿಜೆಪಿ ನಾಯಕ ಸಚಿವರ ಆರೋಪವನ್ನು ತಲ್ಲಿಹಾಕಿದ್ದು, ‘ಇದು ಅಗ್ಗದ ಪ್ರಚಾರದ ತಂತ್ರ’ವೆಂದು ಬಣ್ಣಿಸಿದ್ದಾರೆ. ಸಚಿವರಿಗೆ ಯಾವುದೇ ಅಹವಾಲುಗಳಿದ್ದರೆ ಸೂಕ್ತ ವೇದಿಕೆಯಲ್ಲಿ ತಿಳಿಸಬೇಕಿತ್ತು ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group