ನಿಮ್ಮ ಬರಹ

ಜನವರಿ 30 ಗಾಂಧೀಜಿ ಹುತಾತ್ಮ ದಿನ : ಗಾಂಧೀ ಹಂತಕರು ದೇಶದ ಹಂತಕರು !

ಲೇಖನ  : ಭಾರತೀಯ ಇರ್ಝಾನ್ ಅಡ್ಡೂರು

ಆಧುನಿಕ ಭಾರತದ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳಿಗೆ ಗಾಂಧೀಜಿಯವರ ಕೊಡುಗೆ ಅನನ್ಯವಾಗಿದ್ದು. ಗಾಂಧೀಜಿಯವರು ಶ್ರೇಷ್ಠ, ಮೌನಕ್ರಾಂತಿಕಾರಿ ಮತ್ತು ದೈರ್ಯವಂತರಾಗಿದ್ದರು. ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ಕೊಲೆ ಮಾಡಿದ “ಗಾಂಧಿ ಹಂತಕನನ್ನು ದೇಶದ ಹಂತಕ” ಎಂದು ಬಿಂಬಿಸಬೇಕಾಗಿದೆ.

ಗಾಂಧೀಜಿಯವರು ಹಿಂದೂ ಮುಸ್ಲಿಂಮರ ಸಾಮರಸ್ಯಕ್ಕೆ ಶ್ರಮಿಸಿದರು. ಮಹಮ್ಮದ್ ಜಿನ್ನಾ ಪ್ರತ್ಯೇಕ ಮುಸ್ಲಿಂ ರಾಷ್ಟ್ರವನ್ನು ಕೇಳಿದಾಗಲೂ ತನ್ನ ಕಣ್ಣೀರ ಉತ್ತರವನ್ನು ನೀಡಿದ್ದುದು ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.

ಹಿಂದೂ ಮಹಾಸಭಾ ಇದರ ಮತಾಂಧ ಕಾರ್ಯಕರ್ತನಾದ ಗೋಡ್ಸೆ ಮತ್ತು ಇವನ ಹಿಂಬಾಲಕರು ಹಿಂದಿನಿಂದ ಬಂದು ರಾಷ್ಟ್ರದ ಪಿತಾಮಹಾರನ್ನು  ಗುಂಡಿಟ್ಟು ಕೊಲ್ಲುವ ಮೂಲಕ ಈ ದೇಶದಲ್ಲಿ ಪ್ರಥಮ ಭಯೋತ್ಪಾದನೆ ನಡೆಸಿದರು.

ಶಾಂತಿಯ ಭಾರತ, ಐಕ್ಯತೆಯ ಭಾರತ ನಿರ್ಮಾಣಕ್ಕಾಗಿ ಹಗಲು ಇರುಳು ಶ್ರಮಿಸಿದ, ಈ ದೇಶದ ಭಯೋತ್ಪಾದಕ ಸಂಘಟನೆಯ ಗೂಡ್ಸೆ ಎಂಬ ಭಯೋತ್ಪಾದಕನ ಕೈಯಲ್ಲಿ ಕೊನೆಗೆ ರಾಷ್ಟ್ರ ಪಿತಾಮಹ ಗಾಂಧೀಜಿ ಯವರು ಹುರಾತ್ಮರಾದರು. ಗಾಂಧೀಜಿಯನ್ನು ಕೊಂದ ನರಹಂತಕನನ್ನು ಇಂದು ಈ ದೇಶದಲ್ಲಿ ಪೂಜಿಸುತ್ತಿದ್ದಾರೆ ಎಂದರೆ ಈ ದೇಶದಲ್ಲಿ ಅವರಿಗಿಂತ ದೊಡ್ಡ  ಭಯೋತ್ಪಾದಕರು ಯಾರೂ ಇಲ್ಲ . ದೇಶಪ್ರೇಮದ ಹೆಸರಿನಲ್ಲಿ ಧ್ವೇಷವನ್ನು ಪಸರಿಸುವ ಮಂದಿಗಳು ಇಂದು ದೇಶ ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಂತಹಾ ಶಕ್ತಿಗಳನ್ನು ದೇಶದ ಜನರು ಅರಿಯಬೇಕಾಗಿದೆ.

ದೇಶದಕ್ಕಾಗಿ ದುಡಿದು ಹುತಾತ್ಮರಾದ ಮಹಾತ್ಮ ಗಾಂಧಿಯವರನ್ನು ಈ ಸಂದರ್ಭದಲ್ಲಿ ನೆನಪಿಸುತ್ತಾ…….

ಭಾರತೀಯ ಇರ್ಝಾನ್ ಅಡ್ಡೂರು

To Top
error: Content is protected !!
WhatsApp chat Join our WhatsApp group