ಸಾಮಾಜಿಕ ತಾಣ

ನಟನೆಯ ಬಗ್ಗೆ ‘ಸಾಹೇಬ್’ ಬಳಿ ಸಲಹೆ ಪಡಕೊಳ್ಳಿ ಎಂದು ಜಿಗ್ನೇಶ್ ಬಳಿ ಪ್ರಕಾಶ್ ರೈ ವ್ಯಂಗ್ಯ ! ರೈ-ಜಿಗ್ನೇಶ್ ಫೋಟೋ ಟ್ವೀಟ್

ವರದಿಗಾರ (ಜ 30) :  ಗುಜರಾತಿನ ದಲಿತ ಚಳವಳಿಯ ನಾಯಕ ಹಾಗೂ ಶಾಸಕ ಜಿಗ್ನೇಶ್ ಮೇವಾನಿಯವರು ಖ್ಯಾತ ತಮಿಳು ಚಿತ್ರ ನಿರ್ದೇಶಕ ಪಿ ರಂಜಿತ್ ರವರ ತಮಿಳು ಚಲನ ಚಿತ್ರವೊಂದರಲ್ಲಿ ನಟಿಸುವ ಕುರಿತು ಸುದ್ದಿಯಾಗಿತ್ತು. ಅದರ ಸತ್ಯಾಸತ್ಯತೆಗಳು ಏನೇ ಇದ್ದರೂ, ಸಂದರ್ಭ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿಯವರನ್ನು ಕುಟುಕುತ್ತಲೇ ಇರುವ ಜಿಗ್ನೇಶ್ ಮೇವಾನಿಯವರು ನಿನ್ನೆ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಬಹುಭಾಷಾ ನಟ ಪ್ರಕಾಶ್ ರೈಯವರು ಕೂಡಾ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರನ್ನು ಖಡಕ್ಕಾಗಿ ಟೀಕಿಸುವ ಇಬ್ಬರು ಒಂದಾದರೆ ಮತ್ತೆ ಕೇಳಬೇಕೇ?

ಪ್ರಕಾಶ್ ರೈಯವರನ್ನು ಭೇಟಿಯಾದ ಕ್ಷಣದ ಫೋಟೋವೊಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, ‘ನಟನೆಯ ಕುರಿತಾಗಿ ಒಂದೆರಡು ಸಲಹೆಗಳನ್ನು ಪ್ರಕಾಶ್ ರೈಯವರಲ್ಲಿ ಕೇಳಿದೆ.  ಅದಕ್ಕೆ ರೈ ಅವರು, ನಟನೆಯ ಕುರಿತು ಈ ದೇಶದ ‘ನಟ ಸಾಮ್ರಾಟ’ ಸಾಹೇಬರಲ್ಲಿ ಅತ್ಯುತ್ತಮ ಸಲಹೆಗಳು ಸಿಗಬಹುದೆಂದು ಹೇಳಿದರೆಂದು ಬರೆದುಕೊಂಡಿದ್ದಾರೆ. ಜಿಗ್ನೇಶ್, “ಸಾಹೇಬ್” ಎನ್ನುವ ಪದವನ್ನು ಹೆಚ್ಚಾಗಿ ಮೋದಿಯವರನ್ನು ಉಲ್ಲೇಖಿಸುವಾಗ ಬರೆಯುವ ಪದವಾಗಿದೆ.

ಮೋದಿಯ ಆಡಳಿತ ವೈಖರಿಯನ್ನು ಹಾಗೂ ಫ್ಯಾಸಿಸ್ಟರ ದೇಶದ್ರೋಹಿ ಚಟುವಟಿಕೆಗಳನ್ನು ಖಂಡತುಂಡವಾಗಿ ಟೀಕಿಸುವ ಇವರಿಬ್ಬರು ಒಂದಾದ ವೇಳೆಯನ್ನು ಕೂಡಾ ಮೋದಿಯ ಕಾಲೆಳೆಯುವುದಕ್ಕೆ ಉಪಯೋಗಿಸಿರುವುದು ಕಂಡುಬಂದಿದೆ.

To Top
error: Content is protected !!
WhatsApp chat Join our WhatsApp group