ಸಾಮಾಜಿಕ ತಾಣ

ಅನುಪಮಾ ಶೆಣೈಯವರ ಪಕ್ಷದ ಪ್ರಪ್ರಥಮ ಚುನಾವಣಾ ಪ್ರಣಾಳಿಕೆ ‘ಮೋದಿ ಶಗುನ್ ಭಾಗ್ಯ’ ಘೋಷಣೆ

ವರದಿಗಾರ(ಜ.27): ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಯವರು ಇತ್ತೀಚೆಗಷ್ಟೇ ಸ್ಥಾಪಿಸಿದ ತನ್ನ ಪಕ್ಷದ ಪ್ರಪ್ರಥಮ ಚುನಾವಣಾ ಪ್ರಣಾಳಿಕೆ ‘ಮೋದಿ ಶಗುನ್ ಭಾಗ್ಯ’ವನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಘೋಷಿಸಿದ್ದಾರೆ.

ಇತ್ತೀಚೆಗೆ ಸರಣಿ ಬರಹಗಳ ಮೂಲಕ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅನುಪಮಾ ಶೆಣೈ ತನ್ನ ಮುಖಪುಟದಲ್ಲಿ ಹೇಳಿಕೊಂಡಿರುವಂತೆ, ಮೋದಿ ಅಭಿಮಾನಿಗಳು ಗರಂ ಆಗಿದ್ದಾರೆ, ಸ್ವಲ್ಪ ಅವರನ್ನೆಲ್ಲ ತಣ್ಣಗೆ ಮಾಡಲು ಸಿದ್ದರಾಮಯ್ಯನವರ ಥರಾ ಏನಾದ್ರು ಒಂದು ಭಾಗ್ಯವನ್ನು ಘೋಷಿಸು ಅಂತ ಪಬ್ಲಿಕ್ ಟಿವಿ ರಂಗಣ್ಣ ನಿನ್ನೆ ಮೆಸೆಜ್ ಮಾಡಿದ್ರು!!

ಇಡೀ ರಾತ್ರಿ ಆಲೋಚನೆ ಮಾಡಿ ಮಾಡಿ ಕಡೆಗೂ ಗೌಪ್ಯವಾಗಿ ಇಡಲಾಗಿದ್ದ ನಮ್ಮ ಪಕ್ಷದ ಪ್ರಣಾಳಿಕೆಯ ಮೊದಲ ಯೋಜನೆಯನ್ನು ಇದೀಗ ಬಿಡುಗಡೆ ಮಾಡುತ್ತಿದ್ದೇನೆ!!

ಹಾಗೆ ನೋಡಿದ್ರೆ ಮೋದೀಜಿಯವರೂ ಸಹ ನನ್ನಂತೇ ಸಿದ್ದರಾಮಯ್ಯನವರ ಅಭಿಮಾನಿಗಳು. ಸಿದ್ದರಾಮಯ್ಯನವರ ಶಾದಿಭಾಗ್ಯ ನೋಡಿ ಮೋದೀಜಿಯವರು ಶಾದಿ ಶಗುನ್ ಅಂತ ಯೋಜನೆ ಮಾಡಿದರು.
ಇವರಿಬ್ಬರ ಪ್ರೇರಣೆಯಿಂದ ಹಾಗೂ ಮೋದೀಜಿಯವರ ಹೆಸರು ಇಂದಿರಾ ಕ್ಯಾಂಟೀನಿನಂತೆ ಅಜರಾಮರವಾಗಿ ಉಳಿಯಲೆಂದು ನಮ್ಮ ಪಕ್ಷ ಘೋಷಿಸಲಿರುವ ಪ್ರಪ್ರಥಮ ಯೋಜನೆಯ ಹೆಸರು ಮೋದಿ ಶಗುನ್ ಭಾಗ್ಯ!

ಮೋದೀಜಿಯವರ ಹೆಸರಿನಲ್ಲೇ ಸ್ಕೀಮ್ ನೀಡ್ತಾ ಇದ್ದೇನೆ. ಇನ್ನಾದರೂ ಸಿಟ್ಟು ಕಡಿಮೆ ಮಾಡಿಕೊಳ್ಳಿ ಮೋದೀಜಿ ಅಭಿಮಾನಿಗಳೆ!! ಎಂದೂ ಅವರು ವಿನಂತಿಸಿಕೊಂಡಿದ್ದಾರೆ.

ವಿಶೇಷ ಸೂಚನೆಯಲ್ಲಿ ಹೇಳಿರುವಂತೆ, ‘ಮೋದಿ ಶಗುನ್ ಭಾಗ್ಯ’ ಒಂದು ವಿಸ್ತಾರವಾದ ಯೋಜನೆಯಾಗಿರುವುದರಿಂದ ಮುಂದಿನ ಸ್ಟೇಟಸ್ ನಲ್ಲಿ ಮೋದಿ ಶಗುನ್ ಭಾಗ್ಯದ ಬಗ್ಗೆ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.

ಅನುಪಮಾ ಶೆಣೈ ತನ್ನ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವುದು:

 

Click to comment

Leave a Reply

Your email address will not be published. Required fields are marked *

To Top
error: Content is protected !!