ಜಿಲ್ಲಾ ಸುದ್ದಿ

‘ನನ್ನ ಮಗಳದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ’ : ಕ್ಯಾಂಪಸ್ ಫ್ರಂಟ್ ಹಾಗೂ ವಿಮೆನ್ ಇಂಡಿಯಾ ಮೂವ್’ಮೆಂಟ್ ಪ್ರತಿಭಟನೆಯಲ್ಲಿ ಝೈಬುನ್ನೀಸಾ ತಂದೆಯ ಆರೋಪ !

ವರದಿಗಾರ (ಜ 27 ) :  “ನನ್ನ ಮಗಳು ಝೈಬುನ್ನೀಸಾ ಆತ್ಮಹತ್ಯೆ ಮಾಡುವಂತಹಾ ಸ್ವಭಾವದವಳಲ್ಲ. ಅವಳದ್ದು ವ್ಯವಸ್ಥಿತ ಕೊಲೆ ಎಂದು ಮೃತ ವಿದ್ಯಾರ್ಥಿನಿಯ ತಂದೆ    ಅವರು ಮಂಡ್ಯದ ಕೆ ಆರ್ ಪೇಟೆ ನವೋದಯ ವಸತಿ ನಿಲಯದ ಅಧ್ಯಾಪಕ ರವಿಯ ಮೇಲೆ ಇಂದಿಲ್ಲ ನೇರ ಆರೋಪ ಮಾಡಿದ್ದಾರೆ. ಅವರು ಉಪ್ಪಿನಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಹಾಗೂ ವಿಮೆನ್  ಇಂಡಿಯಾ  ಮೂವ್’ಮೆಂಟ್  ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಝೈಬುನ್ನೀಸಾಳದ್ದು ಆತ್ಮಹತ್ಯೆಯಲ್ಲ ಅದು ಕೊಲೆ. ಆಕೆಗೆ ಅಲ್ಲಿನ ಕೆಲವೊಂದು ನಿಗೂಢ ವಿಷಯಗಳ ಕುರಿತು ಆಕೆಗೆ ತಿಳಿದಿತ್ತು. ಇದನ್ನರಿತ ಅಧ್ಯಾಪಕ ವ್ಯವಸ್ಥಿತವಾಗಿ ಝೈಬುನ್ನೀಸಾಳನ್ನು ಕೊಂದು, ಆತ್ಮಹತ್ಯೆಯ ನಾಟಕವಾಡಿದ್ದಾನೆ ಎಂದು ಆರೋಪಿಸಿದ್ದಾರೆ. ನನ್ನ ಮಗಳಿಗಾದ ಅನ್ಯಾಯ ಹಾಗೂ ನಮಗಾದ ನೋವು ಇನ್ಯಾವ ಪೋಷಕರಿಗೂ ಆಗದಿರಲಿ. ಆದುದರಿಂದ ಹಂತಕನಿಗೆ ಗಲ್ಲಾಗಬೇಕೆಂದು ಅವರು ಗದ್ಗದಿತರಾಗಿ ಆಗ್ರಹಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಸಮಿತಿ ಮತ್ತು ವಿಮೆನ್ಸ್ ಇಂಡಿಯಾ ಮೂವ್ ಮೆಂಟ್ (W.I.M) ವತಿಯಿಂದ ಮೈಸೂರಿನ ಕೆ ಆರ್ ಪೇಟೆಯ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ನಿಗೂಢ ಸಾವನ್ನಪ್ಪಿದ ವಿದ್ಯಾರ್ಥಿನಿ ಝೈಬುನ್ನೀಸಾಳ ಸಾವಿನ ಸಮಗ್ರ ತನಿಖೆ ಹಾಗು ಹೆಚ್ಚಿನ ಪರಿಹಾರ ಮೊತ್ತ ನೀಡುವಂತೆ ಆಗ್ರಹಿಸಿ ಉಪ್ಪಿನಂಗಡಿ ನಾಡಕಛೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಾಕೀರ್, ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ವಿದ್ಯಾರ್ಥಿನಿಯರು ನಿಗೂಢ ಸಾವನ್ನಪ್ಪುತ್ತಿದ್ದಾರೆ,ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವ ಶಿಕ್ಷಕರೆ ಮಕ್ಕಳನ್ನು ದೈಹಿಕ ಮಾನಸಿಕ ಹಿಂಸೆ ನೀಡಿ ಕೊಲ್ಲಲು ಪ್ರೇರಣೆ ನೀಡುತ್ತಿರುವ ಶಿಕ್ಷಕರು ಇವತ್ತು ಶಾಲಾಕಾಲೇಜುಗಳಲ್ಲಿ ಇರುವುದು ರಾಜ್ಯದ ದೊಡ್ಡ ದುರಂತವಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ವುಮೆನ್ಸ್ ಇಂಡಿಯಾ ಮೂವ್’ಮೆಂಟಿನ (W I M) ನಸ್ರೀನ್  ಬೆಳ್ಳಾರೆ,  “ಹೆಣ್ಣು ಭಯದ ವಾತಾವರಣ ದಲ್ಲಿ ಬದುಕುವಂತಹ ಸನ್ನಿವೇಶ ಉಂಟಾಗಿದೆ ಸರಕಾರ ಎಚ್ಚೆತ್ತುಕೊಳ್ಳಬೇಕು” ಎಂದರು.

ಪ್ರತಿಭಟನೆಯಲ್ಲಿ ಝೈಬುನ್ನೀಸಳ ತಂದೆ ಹಾಗೂ ತಾಯಿ ಮಾತನಾಡಿದರು. ಕ್ಯಾಂಪಸ್ ಫ್ರಂಟ್ ದ.ಕ.ಜಿಲ್ಲಾಸಮಿತಿ ಸದಸ್ಯ ತ್ವಾಹ,ಶಾಕೀರ್ ಉಪಸ್ಥಿತಿರಿದ್ದರು. ಪ್ರತಿಭಟನೆಯ ನಂತರ ಉಪತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು. ಶಾಕೀರ್ ಮಡಂತ್ಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

To Top
error: Content is protected !!
WhatsApp chat Join our WhatsApp group