ರಾಜ್ಯ ಸುದ್ದಿ

ಮುಂಬರುವ ಚುನಾವಣೆ ಅಲ್ಲಾಹ್ ಮತ್ತು ರಾಮನ ನಡುವಿನ ಸ್ಪರ್ಧೆ: ದ.ಕ. ಜಿಲ್ಲೆಗೆ ಬೆಂಕಿ ಹಚ್ಚಲು ಮುಂದಾದ ಮತ್ತೊಬ್ಬ ಬಿಜೆಪಿ ನಾಯಕ

ವರದಿಗಾರ(ಜ.23): ಮುಂಬರುವ ವಿಧಾನಸಭಾ ಚುನಾವಣೆ ಅಲ್ಲಾಹ್ ಮತ್ತು ರಾಮನ ನಡುವಿನ ಸ್ಪರ್ಧೆ ಎಂದು ಧರ್ಮ ಧರ್ಮಗಳ ಮಧ್ಯೆ ಒಡಕನ್ನು ಸೃಷ್ಟಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಮತ ದ್ರುವೀಕರಣಕ್ಕಾಗಿ ಬೆಂಕಿ ಹಚ್ಚುವ ಹೇಳಿಕೆಯನ್ನು ನೀಡಿದ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದ ಸೃಷ್ಟಿಸಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಂದರ್ಭ ಈ ರೀತಿಯ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಮಾತನಾಡುತ್ತಾ ನಾನು ಅಲ್ಲಾಹನ ಕೃಪೆಯಿಂದ 7 ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿ ಮುಸಲ್ಮಾನರ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಂತೆ ಪ್ರಯತ್ನಿಸಿದ್ದರು. ರಮಾನಾಥ ರೈ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಶಾಸಕ ಸುನೀಲ್ ಕುಮಾರ್, ಬಂಟ್ವಾಳದಲ್ಲಿ ಈ ಬಾರಿ ರಮಾನಾಥ್ ರೈ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮಧ್ಯೆ ಸ್ಪರ್ಧೆ ನಡೆಯುವುದಲ್ಲ. ಬದಲಾಗಿ ಇಲ್ಲಿ ಅಲ್ಲಾಹು ಮತ್ತು ರಾಮನ ಮಧ್ಯೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಜನರ ಹಿತ, ಅಭಿವೃದ್ಧಿ ಪರವಾದ ಮಾತುಗಳನ್ನಾಡಬೇಕಾಗಿದ್ದ ರಾಜಕೀಯ ನಾಯಕರು ಧರ್ಮ, ಜಾತಿ, ದೇವರ ಹೆಸರನ್ನು ಬಳಸಿಕೊಂಡು ಪ್ರಚಾರ ನಡೆಸುತ್ತಿರುವುದು ವಿಪರ್ಯಾಸವೇ ಸರಿ.
ಸಮಾಜದಲ್ಲಿ ಒಡಕನ್ನು ಸೃಷ್ಟಿಸಿ ಮತ ದ್ರುವೀಕರಣಕ್ಕೆ ಪ್ರಯತ್ನಿಸುತ್ತಿರುವ ಇಂತಹ ಹೇಳಿಕೆಯ ವಿರುದ್ಧ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ.

ವಿಡಿಯೋ ಕೃಪೆ: ವಾರ್ತಾಭಾರತಿ

To Top
error: Content is protected !!
WhatsApp chat Join our WhatsApp group