ಅನಿವಾಸಿ ಕನ್ನಡಿಗರ ವಿಶೇಷ

ಉಮ್ರಾ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ : ದಫನ ಕ್ರಿಯೆಗೆ ನೆರವಾದ ಐ ಎಸ್ ಎಫ್

ವರದಿಗಾರ (ಜ 22 ) : ಪವಿತ್ರ ಉಮ್ರಾ ನಿರ್ವಹಿಸಲು ಮಂಗಳೂರಿನ ರವಾದ್ ಟೂರ್ಸ್ ಮೂಲಕ ಮೆಕ್ಕಾಗೆ ಆಗಮಿಸಿದ ಮಂಗಳೂರು ತಾಲೂಕು ದೇರಳಕಟ್ಟೆ ನಿವಾಸಿ ಇಬ್ರಾಹಿಂ ಎಂಬವರು ಪವಿತ್ರ ಮಕ್ಕಾದಲ್ಲಿ ನಿಧನ ಹೊಂದಿದರು. ಉಮ್ರಾ ನಿರ್ವಹಿಸಿದ ನಂತರ ಜಬಲ್ ಅಲ್ ನೂರ್ ಪರ್ವತ ಏರಿ ಇಳಿದ ನಂತರ ತೀವ್ರ ಅಸ್ವಸ್ಥರಾದ ಇವರಿಗೆ ಎದೆ ನೋವು ಕಾಣಿಸಿಕೊಂಡಿತು ಸೂಕ್ತ ಚಿಕಿತ್ಸೆ ಕೊಡಿಸಿದಾದರೂ ಇಬ್ರಾಹಿಂರವರು ಕೊನೆಯುಸಿರು ಎಳೆದರು.

ಮೃತರ ದಫನ ಕ್ರಿಯೆಗೆ ಬೇಕಾದ ಎಲ್ಲ ದಾಖಲೆಗಳನ್ನು ಟೂರ್ ಅಮೀರ್ ಮೊಹಮ್ಮದ್ ಷರೀಫ್ ಅರ್ಶದಿ ಹಾಗು ಮಂಗಳೂರು ಇಂಟರ್ನ್ಯಾಷನಲ್ ಟೂರ್ಸ್ ಮಾಲೀಕ ಅಬೂಬಕ್ಕರ್ ಅಡ್ಡೂರ್ ಸಂಗ್ರಹಿಸಿದರು. ನಂತರ ಪವಿತ್ರ ಮಕ್ಕಾದ ಬಳಿಯಿರುವ ಖಬರ್ ಸ್ಥಾನದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದಫನ ಕ್ರಿಯೆಯಲ್ಲಿ ಫಾಹಿಮ್ ಟೂರ್ಸ್ ಮಾಲೀಕರಾದ ಕಲಂದರ್ ಹಾಗು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಉಬೈದುಲ್ಲಾ ಬಂಟ್ವಾಳ ಮತ್ತು ಅನ್ಸಾರ್ ದೇರಳಕಟ್ಟೆ ಹಾಗು ಕುಟುಂಬಸ್ಥರು ಬಂಧು ಮಿತ್ರಾದಿಗಳು ಉಪಸ್ಥಿತರಿದ್ದರು .ಮೃತರಿಗಾಗಿ ಮುಹಮ್ಮದ್ ಷರೀಫ್ ಅರ್ಶದಿ ದುಆ ನೆರವೇರಿಸಿ ಮೃತರಿಗಾಗಿ ಮಯ್ಯಿತ್ ನಮಾಜ್ ನಿವಹಿಸಲು ಮನವಿ ಮಾಡಿದರು.

To Top
error: Content is protected !!
WhatsApp chat Join our WhatsApp group